ನ್ಯೂಸ್

29ಕ್ಕೆ 8ನೇ ಸೂರ್ಯಥಾನ್, ಸಾಮೂಹಿಕ 108 ನಮಸ್ಕಾರ

Shivamogga

ಶಿವಮೊಗ್ಗ: ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಶನ್, ಸರ್ಜಿ ಫೌಂಡೇಶನ್, ಪರೋಪಕಾರಂ, ಯೋಗ ಶಿಕ್ಷಣ ಸಮಿತಿ, ಆದಿಚುಂಚನಗಿರಿ ಶಾಲೆ ಸಹಕಾರದಲ್ಲಿ 8ನೇ ಆವೃತ್ತಿಯ ಬೃಹತ್ ಸೂರ್ಯಥಾನ್, ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ಜ. 29ರ ಬೆಳಗ್ಗೆ 5.30ರಿಂದ 8.30ರವರೆಗೆ ಶರಾವತಿನಗರದ ಆದಿಚುಂಚನಗಿರಿ ಶಾಲಾ ಆವರಣದಲ್ಲಿ ನಡೆಯಲಿದೆ.

ಯುವಜನರಲ್ಲಿ ಯೋಗ-ಆರೋಗ್ಯ, ದೇಹಭಕ್ತಿ -ದೇಶಭಕ್ತಿ ಜಾಗೃತಿಗೆ ರಥಸಪ್ತಮಿ, ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ 1,500ಕ್ಕೂ ಅಧಿಕ ಯೋಗಪಟುಗಳು ಭಾಗವಹಿಸುವರು ಎಂದು ಯೋಗಾಚಾರ್ಯ ಅನಿಲ್‌ಕುಮಾರ್ ಶೆಟ್ಟರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಯೋಗ ಪಟುಗಳಿಗೆ ಉಚಿತ ಪ್ರವೇಶ ಕಲ್ಪಿಸಲಿದ್ದು ಬಿಳಿ ಟೀ ಶರ್ಟ್ ಧರಿಸಿ ಐದು ನಿಮಿಷ ಮುಂಚಿತವಾಗಿ ಹಾಜರಿರಬೇಕು. ಭಾಗವಹಿಸುವ ಯೋಗಪಟುಗಳಿಗೆ ಪ್ರಮಾಣಪತ್ರ ವಿತರಿಸಲಾಗುವುದು ಎಂದರು. ಪರೋಪಕಾರಂ ಮುಖ್ಯಸ್ಥ ಎನ್.ಎಂ.ಶ್ರೀಧರ್, ಕಣಾದ ಯೋಗ ಮತ್ತು ರಿಸರ್ಚ್ ಸೆಂಟರ್ ಅಧ್ಯಕ್ಷ ಬೆಲಗೂರು ಮಂಜುನಾಥ್, ಯೋಗ ಶಿಕ್ಷಣ ಸಮಿತಿಯ ರವಿ, ಮಂಜು ಕರ್ನಲ್ಲಿ ಸುದ್ದಿಗೋಷ್ಠಿಯಲ್ಲಿದ್ದರು.