ನ್ಯೂಸ್

ಗವಿ ಗಂಗಾಧರೇಶ್ವರ ಸ್ವಾಮಿಗೆ ಸೂರ್ಯರಶ್ಮಿಯ ಅಭಿಷೇಕ

ಬೆಂಗಳೂರು: ಮಕರ ಸಂಕ್ರಾಂತಿ ದಿನವಾದ ಇಂದು ನಗರದ ಪ್ರಸಿದ್ಧ ಶ್ರೀ ಗವಿಗಂಗಾಧರೇಶ್ವರ ಸ್ವಾಮಿಯನ್ನ ಸೂರ್ಯರಶ್ಮಿಯ ಅಭಿಷೇಕವಾಯಿತು. ದಕ್ಷಿಣಾಯಣ ಪಥ ಮುಗಿಸಿ ಉತ್ತರಾಯಣಕ್ಕೆ ಸಾಗುವ ಸೂರ್ಯ ದೇವನು ಸಂಜೆ 5.20 ರಿಂದ 5.36ರವರೆಗೆ ದೇಗುಲದ ಶಿವಲಿಂಗವನ್ನ ಸ್ಪರ್ಶಿಸಿತು.

ಈ ಅಪರೂಪದ ಕ್ಷಣಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ನೆಲಮಟ್ಟಕ್ಕಿಂದ 120 ಅಡಿ ಆಳದಲ್ಲಿರುವ ಗವಿಗಂಗಾಧರೇಶ್ವರ ಸ್ವಾಮಿಯ ಗರ್ಭಗುಡಿಯನ್ನ ಸೂರ್ಯರಶ್ಮಿಯು ಹಾದುಹೋಯಿತು. ಸೂರ್ಯಾಭಿಷೇಕದ ವೇಳೆ ಶಿವನ ವಿಗ್ರಹಕ್ಕೆ ದೇವಾಲಯದ ಪ್ರಧಾನ ಅರ್ಚಕ ಡಾ.ಸೋಮಸುಂದರ ದೀಕ್ಷಿತ್​ ಅವರು ಎಳನೀರು ಮತ್ತು ಹಾಲಿನ ಅಭಿಷೇಕ ಮಾಡಿದರು. ಸಾವಿರಾರು ಭಕ್ತರು ಶಿವನಾಮ ಜಪಿಸುತ್ತಾ ಭಕ್ತಿಯ ಪರಾಕಷ್ಟೆ ಮೆರೆದರು.