ರಥಸಪ್ತಮಿ ಅಂಗವಾಗಿ ಕಣಾದ ಯೋಗ ರಿಸರ್ಚ್ ಫೌಂಡೇಷನ್ ಏರ್ಪಡಿಸಿದ್ದ ಸೂರ್ಯ ನಮಸ್ಕಾರ ಯಜ್ಞದಲ್ಲಿ ಭಾಗವಹಿಸಿದ್ದ ಯೋಗಪಟುಗಳು. 
ನ್ಯೂಸ್

ಏಕಾಗ್ರತೆ ಹೆಚ್ಚಳಕ್ಕೆ ಸೂರ್ಯ ನಮಸ್ಕಾರ ಸಹಕಾರಿ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಸೂರ್ಯ ನಮಸ್ಕಾರಗಳ ನಿತ್ಯ ಅಭ್ಯಾಸದಿಂದ ಆಯುಷ್ಯ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ. ವಿಶೇಷವಾಗಿ ಮಕ್ಕಳಿಗೆ ಸ್ಮರಣ ಶಕ್ತಿ, ಏಕಾಗ್ರತೆ ಹೆಚ್ಚಿಸಲು ಸಹಾಯಕವಾಗುತ್ತದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ರಥಸಪ್ತಮಿ ಅಂಗವಾಗಿ ಕಣಾದ ಯೋಗ ರಿಸರ್ಚ್ ಫೌಂಡೇಷನ್ ಮತ್ತು ಯುವ ಸಬಲೀಕರಣ ಕ್ರೀಡಾ ಇಲಾಖೆಯಿಂದ ಏರ್ಪಡಿಸಿದ್ದ ಸೂರ್ಯ ನಮಸ್ಕಾರ ಯಜ್ಞದಲ್ಲಿ ಮಾತನಾಡಿದ ಅವರು, ಉತ್ತಮ ಆರೋಗ್ಯಕ್ಕಾಗಿ ಕನಿಷ್ಠ ಸೂರ್ಯ ನಮಸ್ಕಾರ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಯೋಗಗುರು ಅನಿಲ್‌ಕುಮಾರ್ ಎಚ್. ಶೆಟ್ಟರ್ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಜರುಗಿತು. ಸೂರ್ಯ ಮಂಡಲ ಪೂಜೆ ನಂತರದಲ್ಲಿ ಕ್ರೀಡಾಪಟುಗಳು, ಯೋಗಪಟುಗಳು ಮತ್ತು ಸಾರ್ವಜನಿಕರು ಸಾಮೂಹಿಕವಾಗಿ ಬೀಜಾಕ್ಷರ ಮಂತ್ರಗಳ ಸಹಿತ ಸೂರ್ಯ ಶತನಾಮಾವಳಿ ಪಠಣದೊಂದಿಗೆ 60 ನಿಮಿಷಗಳಲ್ಲಿ 108 ಬಾರಿ ಸೂರ್ಯ ನಮಸ್ಕಾರ ಮಾಡಿದರು.