ಬೆಂಗಳೂರು: ಅಕ್ರಮ ಗಣಿಗಾರಿಕೆಯ ಕುರಿತು ವಸ್ತುಸ್ಥಿತಿ ಪರಿಶೀಲಿಸಿ ಶಿಾರಸುಗಳ ಸಹಿತ ವರದಿ ಸಲ್ಲಿಸಲು ರಚಿತ ಸಚಿವ ಸಂಪುಟದ ಉಪಸಮಿತಿ ಪ್ರಾಥಮಿಕ ಸಭೆಯಲ್ಲೇ ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿವೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಮಂಗಳವಾರ ನಡೆದ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ಸಂಬಂಧ ಅಧಿಕಾರಿಗಳು ಸಾಕಷ್ಟು ಮಾಹಿತಿ ಸಂಗ್ರಹಿಸಿ ಸಲ್ಲಿಸಿದ್ದಾರೆ ಎಂದು ಹೇಳಿದರು.
ಅಕ್ರಮ ಗಣಿಗಾರಿಕೆಯಿಂದ ಲೂಟಿಯಾದ ಖನಿಜ ಸಂಪತ್ತು ವಸೂಲಾಗಬೇಕಾಗಿದೆ. ವಿಶೇಷ ನ್ಯಾಯಾಲಯ ಸ್ಥಾಪನೆಗೂ ಗಮನ ನೀಡಬೇಕಾಗಿದೆ. ಅಕ್ರಮ ಗಣಿಗಾರಿಕೆ, ನಂತರದ ಬೆಳವಣಿಗೆ, ವಸ್ತುಸ್ಥಿತಿಯನ್ನು ಪರಾಮರ್ಶಿಸಿ ತೀರ್ಮಾನ ಕೈಗೊಂಡು ಶಿಾರಸು ಮಾಡುವುದಕ್ಕಾಗಿ ಉಪಸಮಿತಿ ರಚನೆಯಾಗಿದೆ ಎಂದರು.
ಅಕ್ರಮ ಗಣಿಗಾರಿಕೆಯಿಂದಾಗಿರುವ ನಷ್ಟದ ಅಂದಾಜು ಮಾಡಲು ಅಧಿಕಾರಿಗಳು ವಿಲರಾಗಿದ್ದಾರೆ. ಈ ವೈಫಲ್ಯಕ್ಕೆ ಕಾರಣವೇನು ? ಎಂದು ಪ್ರಶ್ನಿಸಿ ಮಾಹಿತಿ ನೀಡಲು ನಿರ್ದೇಶಿಸಿದ್ದು, ಬಿಎನ್‌ಎಸ್ ಸೆಕ್ಷನ್ 107 ಆಧರಿಸಿ ಏನು ಕ್ರಮಕೈಗೊಳ್ಳಬಹುದು ಎಂದು ಚರ್ಚಿಸಲಾಗಿದೆ.
ಲೂಟಿಯಾಗಿರುವ ಸಂಪತ್ತು ವಾಪಸ್ ಪಡೆಯುವುದು ಸಮಿತಿ ಉದ್ದೇಶವಾಗಿದೆ. ಗಂಭೀರವಾಗಿ ಚರ್ಚಿಸಿದ್ದು, ಆದಷ್ಟು ಬೇಗ ವರದಿ ನೀಡಲು ಕ್ರಮವಹಿಸುತ್ತೇವೆ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಉಪಸಮಿತಿ ರಚನೆಯಾದ ನಂತರ ಮೊದಲ ಬಾರಿಗೆ ದಾಖಲಾಗಿರುವ ಪ್ರಕರಣಗಳು, ತನಿಖೆಯ ಪ್ರಗತಿ, ಹಿಂದಿನ ಸರ್ಕಾರದ ಅವಧಿಯಲ್ಲಿ ಸಚಿವ ಸಂಪುಟದ ಉಪಸಮಿತಿ ನೀಡಿದ್ದ ವರದಿ ಆಧಾರದ ಮೇಲೆ ಕೈಗೊಂಡ ಕ್ರಮ ಇನ್ನಿತರ ವಿಷಯಗಳನ್ನು ಪರಾಮರ್ಶಿಸಿತು.
ಈಗಾಗಲೇ ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯಸಂಹಿತೆಯಡಿ 62 ಪ್ರಕರಣಗಳ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಈ ಪ್ರಕರಣಗಳಲ್ಲಿ ದಾಖಲಾಗಿರುವ ನಷ್ಟ ಮೊತ್ತ ವಸೂಲಿಗೆ ಬೇಕಾದ ಕ್ರಮಕೈಗೊಳ್ಳಲು ಸಭೆ ಸೂಚಿಸಿತು ಎಂದು ಮೂಲಗಳು ತಿಳಿಸಿವೆ.