ನವದೆಹಲಿ: ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇಟ್ ಮತ್ತು ಬಿಜೆಪಿ ಹಿರಿಯ ನಾಯಕ ಮತ್ತು ಸಂಸದ ದಿಲೀಪ್ ಘೋಷ್ ಅವರಿಗೆ ಚುನಾವಣಾ ಆಯೋಗವು ಶೋಕಾಸ್ ನೋಟಿಸ್ ನೀಡಿದೆ ಎಂದು ಮೂಲಗಳು ಇಂಡಿಯಾ ಟುಡೇ ಟಿವಿಗೆ ತಿಳಿಸಿವೆ.
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ ನಂತರ ನಟಿ ಕಂಗನಾ ರಣಾವತ್ ಮೇಲೆ ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರಿನೇಟ್ ಕೂಡಾ ಇನ್ಸ್ಟಾಗ್ರಾಮ್ನಲ್ಲಿ ಕಂಗನಾ ರಣಾವತ್ ಅವರ ಹಾಟ್ ಫೋಟೊವೊಂದನ್ನು ಪೋಸ್ಟ್ ಮಾಡಿ “ಕ್ಯಾ ಭಾವ್ ಚಲ್ ರಹಾ ಹೈ ಮಂಡಿ ಮೆ ಕೋಯಿ ಬತಾಯೇಗಾ? (ಮಂಡಿಯಲ್ಲಿನ ಏನ್ ರೇಟ್ ಇದೆ ಎಂದು ಯಾರಾದರೂ ಹೇಳುತ್ತೀರಾ?)” ಎಂದು ಬರೆದಿದ್ದರು ಇದಕ್ಕೆ ಜನಾಕ್ರೋಶ ನಂತರ ಆ ಪೋಸ್ಟ್ ಡಿಲೀಟ್ ಮಾಡಿದ್ದರು.
ಬರ್ಧಮಾನ್-ದುರ್ಗಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸಂಸದ ದಿಲೀಪ್ ಘೋಷ್ ಅವರು ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಅವರ ಕುಟುಂಬದ ಹಿನ್ನೆಲೆಯನ್ನು ಲೇವಡಿ ಮಾಡಿದ್ದರು.
ದಿಲೀಪ್ ಘೋಷ್ ಅವರು ‘ಬಂಗಾಳವು ತನ್ನ ಮಗಳನ್ನು ಬಯಸುತ್ತದೆ’ ಎಂಬ ಟಿಎಂಸಿ ಘೋಷವಾಕ್ಯವನ್ನು ಘೋಷ್ ಅಣಕಿಸಿದ್ದರು. ‘ಮಮತಾ ಬ್ಯಾನರ್ಜಿ ಗೋವಾಗೆ ಹೋದಾಗ, ತಾನು ಗೋವಾದ ಮಗಳು ಎನ್ನುತ್ತಾರೆ. ತ್ರಿಪುರಾದಲ್ಲಿ ‘ತ್ರಿಪುರಾದ ಮಗಳು’ ಎನ್ನುತ್ತಾರೆ. ಮೊದಲು... ಸ್ಪಷ್ಟಪಡಿಸಲಿ’ ಎಂದು ಹೇಳಿದ್ದರು.
ಇವರಿಬ್ಬರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಚುನಾವಣಾ ಸಮಿತಿಯು ಮಾರ್ಚ್ 29 ರಂದು ಸಂಜೆ 5 ಗಂಟೆಯೊಳಗೆ ಉತ್ತರ ನೀಡಬೇಕು ಎಂದು ಶೋಕಾಸ್ ನೋಟೀಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ನಾಯಕ ದಿಲೀಪ್ ಘೋಷ್ ವಿವಾದ?: ದಿಲೀಪ್ ಘೋಷ್ ಅವರು ಮಮತಾ ಬ್ಯಾನರ್ಜಿ ಅವರ ಕೌಟುಂಬಿಕ ಹಿನ್ನೆಲೆಯನ್ನು ಅಣಕಿಸಿದ್ದಾರೆ ಎನ್ನಲಾದ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಬಿಜೆಪಿ –ಟಿಎಂಸಿ ನಡುವೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
‘ಬಂಗಾಳವು ತನ್ನ ಮಗಳನ್ನು ಬಯಸುತ್ತದೆ’ ಎಂಬ ಟಿಎಂಸಿ ಘೋಷವಾಕ್ಯವನ್ನು ಘೋಷ್ ಅಣಕಿಸಿದ್ದರು. ‘ಮಮತಾ ಬ್ಯಾನರ್ಜಿ ಗೋವಾಗೆ ಹೋದಾಗ, ತಾನು ಗೋವಾದ ಮಗಳು ಎನ್ನುತ್ತಾರೆ. ತ್ರಿಪುರಾದಲ್ಲಿ ‘ತ್ರಿಪುರಾದ ಮಗಳು’ ಎನ್ನುತ್ತಾರೆ. ಮೊದಲು... ಸ್ಪಷ್ಟಪಡಿಸಲಿ’ ಎಂದು ಹೇಳಿದ್ದರು.
ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರಿನೇಟ್ ವಿವಾದ: ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ ನಂತರ ನಟಿ ಕಂಗನಾ ರಣಾವತ್ ಮೇಲೆ ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರಿನೇಟ್ ಕೂಡಾ ಇನ್ಸ್ಟಾಗ್ರಾಮ್ನಲ್ಲಿ ಕಂಗನಾ ರಣಾವತ್ ಅವರ ಹಾಟ್ ಫೋಟೊವೊಂದನ್ನು ಪೋಸ್ಟ್ ಮಾಡಿ “ಕ್ಯಾ ಭಾವ್ ಚಲ್ ರಹಾ ಹೈ ಮಂಡಿ ಮೆ ಕೋಯಿ ಬತಾಯೇಗಾ? (ಮಂಡಿಯಲ್ಲಿನ ಏನ್ ರೇಟ್ ಇದೆ ಎಂದು ಯಾರಾದರೂ ಹೇಳುತ್ತೀರಾ?)” ಎಂದು ಬರೆದಿದ್ದು, ಜನಾಕ್ರೋಶ ನಂತರ ಆ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಚ್‌ಎಸ್ ಅಹಿರ್, ನಟಿ ಕಂಗನಾ ರಣಾವತ್ ಅವರು ಮಂಡಿಯಿಂದ ಅಭ್ಯರ್ಥಿಯಾಗಿರುವುದನ್ನು ಉಲ್ಲೇಖಿಸಿ, “ಮಂಡಿ ಸೇ ರ*ಡಿ” ಎಂದು ನಿಂದಿಸಿದ್ದರು.