Supreme court: ದೆಹಲಿಯ ಎನ್ಸಿಆರ್ನಲ್ಲಿರುವ ಎಲ್ಲಾ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಲು ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಿದ ಬೆನ್ನಲ್ಲೇ, ದೆಹಲಿಯಾದ್ಯಂತ ಪ್ರಾಣಿಪ್ರಿಯರು ನಿರಾಸೆ ವ್ಯಕ್ತಪಡಿಸಿ, ಈ ನಿರ್ಧಾರದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಈ ಚಳುವಳಿಯಲ್ಲಿ ಜಾನ್ವಿ ಕಪೂರ್, ವರುಣ್ ಧವನ್, ಧನಶ್ರೀ ವರ್ಮಾ ಮತ್ತು ಇತರರು ಸೇರಿದಂತೆ ಹಲವಾರು ನಟ-ನಟಿಯರು ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ: ಶ್ರಾವಣ ಮಾಸದ ಪ್ರಯುಕ್ತ ಬನ್ನಿಕಟ್ಟಿ ಸುಬ್ರಹ್ಮಣ್ಯ ಹಾಗೂ ನಾಗಪ್ಪನ ದೇವಸ್ಥಾನ ವಿಶೇಷ ಪೂಜೆ ಅನ್ನ ಸಂತರ್ಪಣೆ ಕಾರ್ಯಕ್ರಮ.
ನಟಿ ಜಾನ್ವಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ, ಅವರು ಇದನ್ನು ಬೆದರಿಕೆ ಎನ್ನುತ್ತಾರೆ. ಆದರೆ ನಾವು ಅದನ್ನು ಎದೆಬಡಿತ ಎಂದು ಕರೆಯುತ್ತೇವೆ. ಇಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ ಏನೆಂದರೆ, ದೆಹಲಿಯ ಎನ್ಸಿಆರ್ನಲ್ಲಿರುವ ಪ್ರತಿಯೊಂದು ನಾಯಿಯನ್ನು ಕೂಡಿ ಹಾಕಿ ಎಂದಿದೆ. ಇನ್ನು ಅವುಗಳಿಗೆ ಸ್ವಾತಂತ್ರ್ಯವಿಲ್ಲ, ಸೂರ್ಯನ ಬೆಳಕೂ ಇಲ್ಲ. ದಿನನಿತ್ಯ ಬೆಳಕಾದರೆ ಪರಿಚಿತ ಮುಖಗಳನ್ನು ನೋಡುವಂತಿಲ್ಲ. ಇವು ಅಂಗಡಿಯಲ್ಲಿ ಹಾಕುವ ಬಿಸ್ಕೇಟ್ಗಾಗಿ ಕಾಯುತ್ತಿರುವ ಬೀದಿ ನಾಯಿಗಳಲ್ಲ ಬದಲಿಗೆ, ಇವು ರಾತ್ರಿ ಕಾವಲುಗಾರರು.
ಈ ಸಂದೇಶವು ನಾಗರಿಕರ ಸುರಕ್ಷತಾ ಕಾಳಜಿಯನ್ನು ಎತ್ತಿತೋರಿಸುತ್ತಿದೆ. ಇನ್ನು ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ, ಸಮುದಾಯ ಆಹಾರ ವಲಯಗಳು ಮತ್ತು ದತ್ತು ಅಭಿಯಾನಗಳಂತಹ ಇತರ ಉಪಕ್ರಮಗಳಿಂದ ಈ ಸಮಸ್ಯೆಗಳನ್ನು ಬಗೆಹರಿಸಬಹುದು. ದನಿಯಿಲ್ಲದ ಸಮಾಜವನ್ನು ರಕ್ಷಿಸಲು ಸಾಧ್ಯವಾಗದೆ, ತನ್ನ ಆತ್ಮವನ್ನು ಸಮಾಜ ಕಳೆದುಕೊಳ್ಳುತ್ತಿದೆ. ಇಂದು ನಾಯಿಗಳಿಗೆ ಈ ಪರಿಸ್ಥಿತಿಯಾಗಿದೆ. ನಾಳೆ ಬೇರೆ ಯಾರಿಗಾಗಬಹುದು? ಎಂದು ಪ್ರಶ್ನೆ ಮಾಡಿ ಪೋಸ್ಟ್ ಹಾಕಿದ್ದಾರೆ.
ಸುಪ್ರೀಂ ಕೋರ್ಟ್ನ ತೀರ್ಪಿಗೆ ಧನಶ್ರೀ ವರ್ಮಾ ಪ್ರತಿಕ್ರಿಯಿಸಿದ್ದು, ದೆಹಲಿಯ ಜನರು ಬೀದಿ ನಾಯಿಗಳನ್ನುದತ್ತು ತೆಗೆದುಕೊಂಡು ಆಶ್ರಯ ತಾಣಗಳಿಗೆ ದೇಣಿಗೆ ನೀಡಿ, ಇದರಿಂದ ನಾಯಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಬಹುದು ಎಂದು ಒತ್ತಾಯಿಸಿ ಪೋಸ್ಟ್ ಮಾಡಿದ್ದಾರೆ.
ನಟಿ ರವೀನಾ ತಂಡರ್ ಪ್ರತಿಕ್ರಿಯಿಸಿ, "ಇಂಡೀಸ್ ಜನಸಂಖ್ಯೆ ಹೆಚ್ಚಿದೆ ಎಂದು ನನಗೆ ಅನಿಸುತ್ತದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ಬಡ ನಾಯಿಗಳನ್ನು ದೂಷಿಸಬಾರದು. ಇದರರ್ಥ ಲಸಿಕೆ ಮತ್ತು ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಸ್ಥಳೀಯ ಸಂಸ್ಥೆಗಳು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)