ನ್ಯೂಸ್

ವಕ್ಫ್​ ನೇಮಕಾತಿ ತಡೆ ; ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಕೇಂದ್ರಕ್ಕೆ ಸೂಚಿಸಿದ ಸುಪ್ರೀಂಕೋರ್ಟ್ | Waqf

Waqf : ಇತ್ತೀಚಿಗೆ ಜಾರಿಗೆ ತಂದ ವಕ್ಫ್​ ಕಾಯ್ದೆ ನಿಂಬಂಧನೆಗಳಿಗೆ(ತಿದ್ದುಪಡಿ) ಸುಪ್ರೀಂಕೋರ್ಟ್​ 7 ದಿನಗಳವರೆಗೆ ತಡೆಹಿಡಿದಿದೆ. ಅಲ್ಲದೆ, ಮುಂದಿನ ವಿಚಾರಣೆವರೆಗೂ ​ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸಿಜೆಐ ಸಂಜಿವ್​ ಖನ್ನಾ, ನ್ಯಾಯಮೂರ್ತಿಗಳಾದ ಸಂಜಯ್​ ಕುಮಾರ್​, ಕೆ.ವಿ.ವಿಶ್ವನಾಥ್​ ಅವರಿದ್ದ ತ್ರಿಸದಸ್ಯ ಪೀಠ ಗುರುವಾರ ಆದೇಶ ನೀಡಿದೆ.

ಅರ್ಜಿಗಳಿಗೆ ಒಂದು ವಾರದೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸರ್ಕಾರಕ್ಕೆ ಕೋರ್ಟ್​ ಆದೇಶ ನೀಡಿದೆ. ಅಲ್ಲದೆ, ತಿದ್ದುಪಡೆ ಕಾಯ್ದೆಯನ್ನು ಪ್ರಶ್ನಿಸುವ ಅರ್ಜಿದಾರರು 5 ದಿನಗಳಲ್ಲಿ ಮರುಪ್ರತ್ಯಾರೋಪ ಸಲ್ಲಿಸಲು ನ್ಯಾಯಾಲಯ ಅವಕಾಶ ಮಾಡಿಕೊಟ್ಟಿದ್ದು, ಮೇ.5ಕ್ಕೆ ವಿಚಾರಣೆ ಮುಂದೂಡಿದೆ.

ಈ 7 ದಿನಗಳ ಅವಧಿಯಲ್ಲಿ ಕೇಂದ್ರ ವಕ್ಫ್ ಕೌನ್ಸಿಲ್ ಅಥವಾ ರಾಜ್ಯ ವಕ್ಫ್ ಮಂಡಳಿಗಳಿಗೆ ಯಾವುದೇ ನೇಮಕಾತಿಗಳನ್ನು ಮಾಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ್ದು, ಪೀಠ ಪುರಸ್ಕರಿಸಿದೆ.(ಏಜೆನ್ಸೀಸ್​)