ನ್ಯೂಸ್

ಆರ್ಥಿಕವಾಗಿ ಹಿಂದುಳಿದವರ ಮೀಸಲಾತಿಯನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್​...

ನವದೆಹಲಿ: ಆರ್ಥಿಕವಾಗಿ ಹಿಂದುಳಿದವರ ಮೀಸಲಾತಿ (ಇ.ಡಬ್ಲ್ಯೂ.ಎಸ್​) ಕಾಯ್ದೆಯನ್ನು ಸಮರ್ಥಿಸಿ ಸುಪ್ರೀಂ ಕೋರ್ಟ್​ ನಿರ್ಣಯ ನೀಡಿದೆ.

ಜನರಲ್​ ಕೆಟಗರಿಯಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿಯನ್ನು ನೀಡಬೇಕು ಎನ್ನುವ ಕಾನೂನನ್ನು ಈ ಹಿಂದೆ ಸಾಂವಿಧನಿಕವೋ ಅಲ್ಲವೋ ಎಂದು ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಲಾಗಿತ್ತು. ಈಗ ಈ ಕಾನೂನನ್ನು ಕೋರ್ಟ್​ ಎತ್ತಿಹಿಡಿದಿದೆ.

ಐವರು ನ್ಯಾಯಾಧೀಶರ ಪೀಠದಲ್ಲಿ ಬಹುಮತದ ಆಧಾರದ ಮೇಲೆ ಈ ಮಹತ್ವದ ನಿರ್ಧಾರವನ್ನು ಕೋರ್ಟ್​ ತೆಗೆದುಕೊಂಡಿದೆ. ಪೀಠದಲ್ಲಿ ಜಸ್ಟೀಸ್​ ದಿನೇಶ್​ ಮಹೇಶ್ವರಿ, ಬೇಲಾ ತ್ರಿವೇದಿ, ಜೆಬಿ ಪರ್ದಿವಾಲಾ ಇ.ಡಬ್ಲ್ಯೂ.ಎಸ್​ ಸಮರ್ಥನೆ ಮಾಡಿದ್ದಾರೆ.

ಈ ತೀರ್ಪಿನ ಬಗ್ಗೆ ಮಾತನಾಡಿರುವ ನ್ಯಾಯಾಧೀಶೆ ಬೇಲಾ ತ್ರಿವೇದಿ ‘ಜನರಲ್​ ಕೆಟಗರಿಗೆ ಇ.ಡಬ್ಲ್ಯೂ.ಎಸ್​ ಶೇಕಡ 10 ಮೀಸಲಾತಿ ಸಾಂವಿಧಾನಿಕ’ ಎಂದು ಹೇಳಿದ್ದಾರೆ. (ಏಜೆನ್ಸೀಸ್​)