ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಕೈದಿಗಳಿಗೆ ಮುಂದಿನ 15 ದಿನದೊಳಗೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಆರ್.ಷಾ, ಸಿ.ಟಿ.ರವಿಕುಮಾರ್ ಅವರಿದ್ದ ದ್ವಿ ಸದಸ್ಯ ಪೀಠವು ಕೋವಿಡ್ ಸಮಯದಲ್ಲಿ ಪೆರೋಲ್ ಮೇಲೆ ಬಿಡುಗಡೆ ಆಗಿದ್ದವರು ಮುಂದಿನ 15 ದಿನಗಳ ಒಳಗೆ ಶರಣಾಗಬೇಕು. ಶರಣಾದ ನಂತರ ಜಾಮೀನು ಕೋರಿ ಸಕ್ಷಮ ನ್ಯಾಯಅಲಯಗಳಿಗೆ ಜಾಮೀನು ಅರ್ಜಿ ಸಲ್ಲಿಸಬಹುದು ಎಂದು ಪೀಠ ಹೇಳಿದೆ.
ಕೋವಿಡ್ ಸಾಂಕ್ರಾಮಿಕದ ವೇಳೆ ಜೈಲ್ಲಿನಲ್ಲಿ ದಟ್ಟಣೆ ತಪ್ಪಿಸಲು 2020-21ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರಚನೆಯಾಗಿದ್ದ ಉನ್ನತಾಧಿಕಾರ ಸಮಿತಿ ಶಿಫಾರಸ್ಸನ್ನ ಆಧರಿಸಿ ಗಂಭೀರವಲ್ಲದ ಅಪರಾಧ ಪ್ರಕರಣಗಳಲ್ಲಿ ಬಂಧಿಸಿದ್ದ ಕೈದಿಗಳನ್ನ ಬಿಡುಗಡೆ ಮಾಡಲಾಗಿತ್ತು.