ನ್ಯೂಸ್

ಸಾಂಪ್ರದಾಯಿಕ ಉಡುಗೆಯಲ್ಲಿ ಸನ್ನಿ ಲಿಯೋನ್​​ ರ‍್ಯಾಂಪ್ ವಾಕ್​​; ಸ್ಟನ್ನಿಂಗ್​​ ಲುಕ್​​​​​​​ಗೆ ಫಿದಾ ಆಗದವರೇ ಇಲ್ಲ | Sunny Leone

ಮುಂಬೈ: ಬಿಟೌನ್​​​​​​​​ನ ಹಾಟ್​​ ಆ್ಯಂಡ್​​ ಬೋಲ್ಡ್​​ ನಟಿ ಸನ್ನಿ ಲಿಯೋನ್(Sunny Leone)​​ ತಮ್ಮ ಮಾದಕ ಲುಕ್​ನಿಂದಲೇ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಸನ್ನಿ ಲಿಯೋನ್ ಆಗಾಗ್ಗೆ ತನ್ನ ಕುಟುಂಬದೊಂದಿಗಿನ ವಿಶೇಷ ಕ್ಷಣಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಸದ್ಯ ಸಾಮಾಜಿಕ ಜಾಲತಾಣಲದ್ಲಿ ಸನ್ನಿ ಲಿಯೋನ್​​ ಮತ್ತು ಆಕೆಯ ಮಕ್ಕಳ ವಿಡಿಯೋವೊಂದು ವೈರಲ್​ ಆಗಿದೆ.

ವೈರಲ್​ ವಿಡಿಯೋದಲ್ಲಿ ಇತ್ತೀಚೆಗೆಷ್ಟೇ ನಡೆದ ಫ್ಯಾಷನ್​​ ಶೋ ಒಂದರ ರ‍್ಯಾಂಪ್ ವಾಕ್​​ನಲ್ಲಿ ನಟಿ ಸನ್ನಿ ಲಿಯೋನ್​ ಎಲ್ಲರ ಗಮನ ಸೆಳೆದಿದ್ದಾರೆ. ಹೌದು ಸಾಂಪ್ರದಾಯಿಕ ಉಡುಗೆಯಲ್ಲಿ ಮದುಮಗಳಂತೆ ಕಂಗೊಳಿಸಿದ್ದಾರೆ. ಫ್ಯಾಷನ್ ಶೋನಲ್ಲಿ ಸನ್ನಿ ಲಿಯೋನ್​ ಎಲ್ಲರ ಗಮನ ಸೆಳೆದಿರುವುದು ಎಷ್ಟು ನಿಜವೋ ಅಷ್ಟೇ ಅವರ ಮಕ್ಕಳು ಕೂಡ ಎಲ್ಲರನ್ನೂ ತಮ್ಮತ್ತ ಆಕರ್ಷಿಸಿದ್ದಾರೆ.

ಹೌದು ಫ್ಯಾಷನ್​ ಶೋನ ರ‍್ಯಾಂಪ್ ವಾಕ್​​ನಲ್ಲಿ ತನ್ನ ತಾಯಿಯನ್ನು ವಧುವಿನಂತೆ ನೋಡಿ ಮಕ್ಕಳ ಬಹಳ ಸಂತೋಷಪಟ್ಟಿದ್ದಾರೆ. ಅಲ್ಲದೆ ತನ್ನ ತಾಯಿಯನ್ನು ಹುರಿದುಂಬಿಸಲು ಚಪ್ಪಾಳೆ ತಟ್ಟಿದ್ದಾರೆ. ಮಕ್ಕಳ ಜತಗೆ ಸನ್ನಿ ಪತಿಯೂ ಚಪ್ಪಾಳೆ ತಟ್ಟುತ ಖುಷಿಪಟ್ಟಿದ್ದಾರೆ. ಮಕ್ಕಳನ್ನ ನೋಡಿ ಸನ್ನಿ ಲಿಯೋನ್​​​ ಫ್ಲೈಯಿಂಗ್ ಕಿಸ್ ಕೊಡುವುದನ್ನು ವಿಡಿಯೋದಲ್ಲಿ ನೋಡಬಹುದು.

ವೇದಿಕೆಯಿಂದ ಹೊರ ಬಂದ ಬಳಿಕ ಸನ್ನಿ ಲಿಯೋನ್​ ತನ್ನ ಮಕ್ಕಳನ್ನು ಅಪ್ಪಿ ಮುದ್ದಾಡಿರುವ ವಿಡಿಯೋ ಕೂಡ್​ ವೈರಲ್​ ಆಗಿದೆ.

ಸನ್ನಿ ಲಿಯೋನ್​​ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ 2011ರಲ್ಲಿ ತಾವು ಮದುವೆಯಾಗಿರುವುದಾಗಿ ಸನ್ನಿ ಲಿಯೋನ್​​ ಬಹಿರಂಗಪಡಿಸಿದರು. ಅಮೇರಿಕನ್ ನಟ ಮತ್ತು ನಿರ್ಮಾಪಕ ಡೇನಿಯಲ್ ವೆಬರ್ ಅವರನ್ನು ವಿವಾಹವಾದರು. ಜುಲೈ 2017ರಲ್ಲಿ ದಂಪತಿ ತಮ್ಮ ಮೊದಲ ಮಗುವನ್ನು ಮಹಾರಾಷ್ಟ್ರದ ಲಾತೂರ್ ಎಂಬ ಹಳ್ಳಿಯಿಂದ ದತ್ತು ಪಡೆದರು. ನಿಶಾ ಎಂದು ಹೆಸರಿಟ್ಟಿದ್ದಾರೆ, ಮಗುವನ್ನು ದತ್ತು ಪಡೆದಾಗ ಆಕೆಗೆ 21 ತಿಂಗಳು. ನಂತರ ಮಾರ್ಚ್ 2018ರಲ್ಲಿ ಸನ್ನಿ ಮತ್ತು ಡೇನಿಯಲ್ ಬಾಡಿಗೆ ತಾಯ್ತನದ ಮೂಲಕ ತಮ್ಮ ಅವಳಿ ಗಂಡುಮಕ್ಕಳ ಜನನವನ್ನು ಬಹಿರಂಗಪಡಿಸಿದರು.ತಮ್ಮ ಪುತ್ರರಿಗೆ ಅಶರ್ ಸಿಂಗ್ ವೆಬರ್ ಮತ್ತು ನೋಹ್ ಸಿಂಗ್ ವೆಬರ್ ಎಂದು ಹೆಸರಿಟ್ಟಿದ್ದಾರೆ.(ಏಜೆನ್ಸೀಸ್​​)