ನ್ಯೂಸ್

ಮಳೆ ಅವಾಂತರ; ಕೋಟಿ.. ಕೋಟಿ ಬೆಲೆ ಬಾಳುವ 3 ಕಾರು ಕಳೆದುಕೊಂಡ ನಟಿ ಸನ್ನಿ ಲಿಯೋನ್

ಮುಂಬೈ: ಬಾಲಿವುಡ್​ ನಟಿ ಸನ್ನಿ ಲಿಯೋನ್ ಭಾರತಕ್ಕೆ ಆಮದು ಮಾಡಿಕೊಂಡಿದ್ದ ಮೂರು ಐಷಾರಾಮಿ ಕಾರುಗಳು ಮಳೆಗೆ ಕೊಚ್ಚಿಕೊಂಡು ಹೋದ ಕರಾಳ ಅನುಭವವನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.

ಅಮೆರಿಕದಲ್ಲಿ ನೆಲೆಸಿದ್ದ ಸನ್ನಿ ಲಿಯೋನ್​ ಮೊದಲ ಬಾರಿಗೆ ಭಾರತಕ್ಕೆ ಬಂದಾಗ, ಭಾರತದ  ಮಳೆಗಾಲದ ಕುರಿತು ತಮ್ಮ ಪ್ರೀತಿ ಹಾಗೂ ನೆನಪುಗಳ ಬಗ್ಗೆ ಇತ್ತೀಚೆಗೆ ಮಾತನಾಡಿದ್ದಾರೆ.

ಮಾಧ್ಯಮದ ಸಂದರ್ಶನವೊಂದರ ವೇಳೆ ಮಾತನಾಡಿದ ಸನ್ನಿ ಲಿಯೋನ್​, 'ಮುಂಬೈ ಮಳೆಯ ಬಗ್ಗೆ ತನಗೆ ತಿಳಿದಿರಲಿಲ್ಲ.  ಅಷ್ಟು ಮಳೆ ಆಕಾಶದಿಂದ ಬೀಳಬಹುದು ಎಂಬ ಊಹೆ ಕೂಡಾ ಇರಲಿಲ್ಲ. ನಾನು ಮುಂಬೈನಲ್ಲಿ ವಾಸಿಸುತ್ತಿದ್ದೆ. ನಿಜವಾಗಿಯೂ ಸಮುದ್ರದ ಹತ್ತಿರ, ನಾನು ಕೆಲಸಕ್ಕಾಗಿ ಭಾರತಕ್ಕೆ ಬಂದಾಗ, ಇಲ್ಲಿಯ ಮಳೆಯ ರೌದ್ರ ನರ್ತನ ನೋಡಿ ಶಾಕ್​ ಆದೆ. ಇಲ್ಲಿಯ ಹವಾಮಾನವನ್ನು  ನಾನು ಇಷ್ಟಪಟ್ಟೆ. ನನ್ನ ಮೂರು ಕಾರುಗಳು ಕೊಚ್ಚಿ ಹೋದ ನೋವೂ ನನಗಿದೆ.  ಏಕೆಂದರೆ ಭಾರತಕ್ಕೆ ಆ ಕಾರುಗಳನ್ನು  ಆಮದು ಮಾಡಿಕೊಂಡಿದ್ದೆ. ಆ ಸಂದರ್ಭದಲ್ಲಿ ದುಬಾರಿ ತೆರಿಗೆಯನ್ನು ಪಾವತಿಸಿದ್ದೆ ಎಂದಿದ್ದಾರೆ.

ಒಂದು ಕಾರು ಎಂಟು ಆಸನಗಳ ಮರ್ಸಿಡಿಸ್  ಆಗಿತ್ತು. ಆದರೆ ಅದೇ ಕೊನೆ. ಯಾವುದೇ ಕಾರುಗಳನ್ನು ಆಮದು ಮಾಡಿಕೊಳ್ಳಲಿಲ್ಲ. ಈಗ ನಾನು ಭಾರತ ನಿರ್ಮಿತ ಕಾರುಗಳನ್ನು ಪ್ರೀತಿಸುತ್ತೇನೆ. ಇಲ್ಲಿಯ ಕಾರುಗಳು ಮಳೆಗಾಲಕ್ಕೂ ತಕ್ಕಂತೆ ರೂಪಿಸಲಾಗುತ್ತದೆ ಎನ್ನುವುದನ್ನು ಅರಿತಿದ್ದೇನೆ ಎಂದಿದ್ದಾರೆ.