ನ್ಯೂಸ್

ಈ ಕಾರಣಕ್ಕಾಗಿ ಸನ್ನಿ ಡಿಯೋಲ್ ಪತ್ನಿ ಪೂಜಾ ಜೊತೆ ಬಾಲಿವುಡ್ ಪಾರ್ಟಿಗಳಿಗೆ ಹಾಜರಾಗುವುದಿಲ್ಲ; ನಟನ ಹಳೆಯ ಸಂದರ್ಶನ ವೈರಲ್

ಮುಂಬೈ: 2023ನೇ ವರ್ಷವು ಸನ್ನಿ ಡಿಯೋಲ್‌ಗೆ ಸಾಕಷ್ಟು ಸಂತೋಷ ತಂದಿದೆ. ಏಕೆಂದರೆ ಈ ವರ್ಷದ ಆಗಸ್ಟ್‌ನಲ್ಲಿ ಬಿಡುಗಡೆಯಾದ ಅವರ 'ಗದರ್ 2' ಚಿತ್ರವು ಬಾಕ್ಸ್ ಆಫೀಸ್ ಹಿಟ್ ಆಗಿದ್ದರೆ, ಮತ್ತೊಂದೆಡೆ ಅವರ ಮಗ ಕರಣ್ ಡಿಯೋಲ್ ಅದ್ಧೂರಿಯಾಗಿ ಮದುವೆಯಾದರು.

ಅಭಿಮಾನಿಗಳು ಸನ್ನಿ ಡಿಯೋಲ್ ಅವರನ್ನು ನಟನಾಗಿ ಮಾತ್ರವಲ್ಲದೆ, ಫ್ಯಾಮಿಲಿ ಮ್ಯಾನ್​​​​ ಇಮೇಜ್‌ಗಾಗಿಯೂ ಪ್ರಶಂಸಿಸುತ್ತಾರೆ. ಸನ್ನಿ ಡಿಯೋಲ್ ಅವರ ಮಕ್ಕಳಾದ ಕರಣ್ ಮತ್ತು ರಾಜ್‌ವೀರ್ ಬಗ್ಗೆ ಎಲ್ಲರಿಗೂ ತಿಳಿದಿದೆ, ಆದರೆ ಅವರ ಪತ್ನಿ ಪೂಜಾ ಡಿಯೋಲ್ ಬಗ್ಗೆ ತಿಳಿಯಲು ಅಭಿಮಾನಿಗಳು ಆಗಾಗ್ಗೆ ಉತ್ಸುಕರಾಗಿರುತ್ತಾರೆ.  

ಇದೀಗ ಕರಣ್ ಜೋಹರ್ ಅವರೊಂದಿಗೆ ಸನ್ನಿ ಡಿಯೋಲ್ ಅವರ ಸಂದರ್ಶನವು ವೈರಲ್ ಆಗುತ್ತಿದೆ, ಇದರಲ್ಲಿ ನಟನು ತನ್ನ ಹೆಂಡತಿಯೊಂದಿಗೆ ಬಾಲಿವುಡ್ ಪಾರ್ಟಿಗಳಿಗೆ ಹಾಜರಾಗದಿರಲು ಕಾರಣವನ್ನು ವಿವರಿಸುತ್ತಿರುವುದನ್ನು ನೋಡಬಹುದು.

ಕರಣ್ ಜೋಹರ್ ಅವರ ಚಾಟ್ ಶೋ 'ಕಾಫಿ ವಿತ್ ಕರಣ್' ನಲ್ಲಿ ಸನ್ನಿ ಡಿಯೋಲ್ ಶೀಘ್ರದಲ್ಲೇ ಸಹೋದರ ಬಾಬಿ ಡಿಯೋಲ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. 18 ವರ್ಷಗಳ ನಂತರ ಸನ್ನಿ ಡಿಯೋಲ್ ಈ ಕಾರ್ಯಕ್ರಮಕ್ಕೆ ಮರಳುತ್ತಿದ್ದಾರೆ.                 

ಸೀಸನ್ 1 ನಲ್ಲಿಯೇ, ಈ ಚಾಟ್ ಶೋನಲ್ಲಿ, ಕರಣ್ ಜೋಹರ್ ಅವರು ತಮ್ಮ ಹೆಂಡತಿ ಪೂಜಾ ಅವರನ್ನು ಲೈಮ್‌ಲೈಟ್‌ನಿಂದ ಏಕೆ ದೂರವಿಡುತ್ತೀರಿ ಎಂದು ಸನ್ನಿಯನ್ನು ಕೇಳಿದಾಗ, ಅವರು ಹೀಗೆ ಉತ್ತರಿಸಿದರು...

ಸನ್ನಿ ಡಿಯೋಲ್ ಅವರು ಕಾಫಿ ವಿತ್ ಕರಣ್ ಸೀಸನ್ 1 ರಲ್ಲಿ ಅವರು ತುಂಬಾ ನಾಚಿಕೆ ಸ್ವಭಾವದ ವ್ಯಕ್ತಿ ಎಂದು ಹೇಳಿದ್ದರು, ಇದರಿಂದಾಗಿ ಅವರು ಬಾಲಿವುಡ್ ಪಾರ್ಟಿಗಳಿಂದ ದೂರವಿರುತ್ತಾರೆ. "ನಾನು ಕುಡಿಯುವುದಿಲ್ಲ, ನಾನು ಸ್ವಲ್ಪ ನಾಚಿಕೆಪಡುತ್ತೇನೆ, ನನಗೆ ಇಡೀ ದಿನ ಕೆಲಸ ಮಾಡಿದ ನಂತರ ವಿಶ್ರಾಂತಿ ಪಡೆಯಲು ಸ್ಥಳ ಬೇಕು. ನಾನು ಬೆಳಗ್ಗೆ ಬೇಗ ಏಳುತ್ತೇನೆ. ಬಾಲಿವುಡ್ ಪಾರ್ಟಿಗಳು ತಡರಾತ್ರಿಯವರೆಗೂ ನಡೆಯುತ್ತವೆ." ಎಂದು ಹೇಳಿದ್ದರು.

ಸನ್ನಿ ಡಿಯೋಲ್ ಗದರ್ 2 ನಂತರ, ಶೀಘ್ರದಲ್ಲೇ ರಾಜ್‌ಕುಮಾರ್ ಸಂತೋಷಿ ನಿರ್ದೇಶನದ, ಅಮೀರ್ ಖಾನ್ ನಿರ್ಮಾಣದ ಲಾಹೋರ್: 1947, ಕಾಣಿಸಿಕೊಳ್ಳಲಿದ್ದಾರೆ.