ನ್ಯೂಸ್

ಸುನಿಲ್ ಕುಮಾರ್ ಮಿ.ಪಿರಿಯಾಪಟ್ಟಣ ಕ್ಲಾಸಿಕ್

Mysuru Rural

ಪಿರಿಯಾಪಟ್ಟಣ: ಕುಟ್ಟಿ ಮಲ್ಟಿಜಿಮ್ ವತಿಯಿಂದ ಪಟ್ಟಣದಲ್ಲಿ ಇತ್ತೀಚೆಗೆ ಮೊದಲ ಬಾರಿಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಕುಶಾಲನಗರದ ಸುನಿಲ್ ಕುಮಾರ್ ಮಿಸ್ಟರ್ ಪಿರಿಯಾಪಟ್ಟಣ ಕ್ಲಾಸಿಕ್ ಆಗಿ ಆಯ್ಕೆಯಾಗಿದ್ದಾರೆ.

ಸ್ಪರ್ಧೆಯಲ್ಲಿ ಮೋಸ್ಟ್ ಮಸ್ಕಲರ್ ಆಗಿ ನಂಜನಗೂಡಿನ ನಂಜುಂಡಸ್ವಾಮಿ ಆಯ್ಕೆಯಾದರೆ, ಬೆಸ್ಟ್ ಪೋಸರ್ ಆಗಿ ಮಡಿಕೇರಿಯ ಸುರೇಶ್ ಆಯ್ಕೆಯಾದರು.

ತೀರ್ಪುಗಾರರಾಗಿ ರಾಜ್ಯಮಟ್ಟದ ದೇಹದಾರ್ಢ್ಯಪಟುಗಳಾದ ಪವನ್, ಫ್ಕೆಕ್ಸ್ ವರ್ಗೀಸ್, ಮಹೇಶ್ ಗಿಣಿ ಕಾರ್ಯನಿರ್ವಹಿಸಿದರು.

ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಸ್ಪರ್ಧೆಯನ್ನು ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ ಉದ್ಘಾಟಿಸಿ ಮಾತನಾಡಿ, ಜಿಮ್ಗೆ ತೆರಳಿ ದೇಹವನ್ನು ದಂಡಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿ ಖ್ಯಾತಿ ಹೊಂದುವ ಅವಕಾಶವಿದೆ ಎಂದರು.

ನ್ಯಾಷನಲ್ ಕೌನ್ಸಿಲ್ ಫಾರ್ ಮಾರ್ಷಲ್ ಆರ್ಟ್ಸ್‌ನ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು. ಸ್ಪರ್ಧೆ ಆಯೋಜಕ ಸ್ನೇಹಿತ್ ಕುಟ್ಟಿ, ಪುರಸಭೆ ಸದಸ್ಯ ಪಿ.ಎಂ.ವಿನೋದ್, ಬಿಜೆಪಿ ಮುಖಂಡರಾದ ಸೋಮಶೇಖರ್, ರವಿ, ಜೆಡಿಎಸ್ ಮುಖಂಡರಾದ ಅಪೂರ್ವ ಮೋಹನ್, ಮಲ್ಲಿಕಾ, ಗ್ರಾ.ಪಂ.ಸದಸ್ಯ ಟಿ.ಡಿ.ಸುಬ್ರಮಣ್ಯ ಹಾಜರಿದ್ದರು.