ರಾಣೆಬೆನ್ನೂರ: ಭಗವಾನ ವಿಶ್ವಕರ್ಮ ಜಯಂತಿಯು ಜನರ ದೈವಿಕ ಕಲೆಯನ್ನು ಅಂಗೀಕರಿಸುವ ಮೆಚ್ಚುಗೆ ಮತ್ತು ಕೃತಜ್ಞತೆಯಾಗಿದೆ ಎಂದು ಎನ್ಎಸ್ಎಸ್ ಜಿಲ್ಲಾ ನೋಡಲ್ ಅಧಿಕಾರಿ ಎಚ್. ಶಿವಾನಂದ ಹೇಳಿದರು.
ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಸದ್ಗುರು ಶಿವಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜ್ನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಜನರು ಈ ದಿನವನ್ನು ಮೆಚ್ಚುಗೆಯ ದಿನವೆಂದು ಗುರುತಿಸುತ್ತಾರೆ. ನಮ್ಮ ಜಗತ್ತನ್ನು ರೂಪಿಸಿದ ದೈವಿಕ ಕಲೆಯನ್ನು ಗುರುತಿಸಲಾಗುತ್ತದೆ. ಭಕ್ತಿಯಿಂದ ವಿಶ್ವಕರ್ಮ ಜಯಂತಿ ಆಚರಿಸಲಾಗುತ್ತದೆ ಎಂದರು.
ಪ್ರಮುಖರಾದ ಮಲ್ಲಿಕಾರ್ಜುನ ಮುರ್ನಾಳ, ರೇವಣ್ಣ ನಾಯ್ಕ, ಸಂತೋಷ ಅಂಗಡಿ, ಪೂಣಿರ್ಮಾ ಮಾಗನೂರು ಹಾಗೂ ಸಿಬ್ಬಂದಿ ಇದ್ದರು.