ನ್ಯೂಸ್

ಆಟಪಾಠಗಳೇರಡು ಜೀವನದ ಎರಡು ಕಣ್ಣುಗಳಿದ್ದಂತೆ; ಅಯ್ಯನಗೌಡ್ರ

ರಾಣೆಬೆನ್ನೂರ: ಆಟ-ಪಾಠಗಳೆರಡು ವಿದ್ಯಾಥಿರ್ ಜೀವನದ ಎರಡು ಕಣ್ಣುಗಳಿದ್ದಂತೆ, ಇವು ಸರಿಯಿದ್ದರೆ ದೃಷ್ಟಿ-ದೃಷ್ಟಿಕೋನಗಳೆರಡು ಚೆನ್ನಾಗಿರುತ್ತವೆ ಎಂದು ಪ್ರಾಚಾರ್ಯ ಆರ್​.ಎಫ್​. ಅಯ್ಯನಗೌಡ್ರ ಹೇಳಿದರು.

ತಾಲೂಕಿನ ಸುಣಕಲ್ಲಬಿದರಿ ಶ್ರೀ ಅರಳಿ ಶಿದ್ಲಿಂಗಪ್ಪ ಬಸಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾಷಿರ್ಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ಯಾಥಿರ್ಗಳು ಆಟಗಳಲ್ಲಿ ತೋರಿಸುವ ಆಸಕ್ತಿಯನ್ನು ತರಗತಿಗಳ ಪಾಠಗಳಲ್ಲಿಯೂ ತೋರಿಸಬೇಕು. ಪಾಠ ಬುದ್ದಿಯನ್ನು ಬಲಗೊಳಿಸಿದರೆ, ಆಟ ದೈಹಿಕವಾಗಿ ಸದೃಢವಾಗಿಸುತ್ತದೆ ಎಂದರು.

ಉಪನ್ಯಾಸಕರಾದ ಡಾ. ಎಸ್​.ಪಿ. ಗೌಡರ, ಡಾ. ಬಸವರಾಜ ಹುಗ್ಗಿ, ಅಂಬಿಕಾ ಹೊಸಮನಿ, ಡಾ. ಹನುಮಂತರಾಜು, ಡಾ. ರವಿ ಎಂ., ರವಿಕುಮಾರ ಎಸ್​.ಯು, ಡಾ. ನಾಗರಾಜ ಗೋಡಿಹಾಳ, ಅಧೀಕ್ಷಕ ಸತೀಶ ಎಂ., ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ಗಂಗಮ್ಮ, ಡಾ. ಹೊನ್ನಪ್ಪ ಹೊನ್ನಪ್ಪನವರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.