ರಾಣೆಬೆನ್ನೂರ: ಇಂದಿನ ದಿನಮಾನಗಳಲ್ಲಿ ನಮ್ಮ ಓದು ಇಂಟರನೆಟ್ನಲ್ಲಿ ಲಭ್ಯವಾಗುವಂತಹ ಮಾಹಿತಿಗಳಿಗೆ ಸೀಮಿತವಾಗಿದೆ ಎಂದು ಉಪನ್ಯಾಸಕ ಡಾ. ಕಾಂತೇಶರೆಡ್ಡಿ ಗೋಡಿಹಾಳ ಹೇಳಿದರು.
ತಾಲೂಕಿನ ಸುಣಕಲ್ಲಬಿದರಿಯ ಶ್ರೀ ಅರಳಿ ಶಿದ್ಲಿಂಗಪ್ಪ ಬಸಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನಲ್ಲಿ ಸೋಮವಾರ ಏರ್ಪಡಿಸಿದ್ದ ಓದುವ ಹವ್ಯಾಸದ ಶ್ರೇಷ್ಠತೆ ಎಂಬ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನೆಗಳಲ್ಲಿ ಪುಸ್ತಕ ಇಟ್ಟುಕೊಳ್ಳುವರು, ಓದುವವರು ಶ್ರೀಮಂತರೆಂಬ ಮಾತುಗಳಿದ್ದವು. ಈಗ ಪುಸ್ತಕ ಇಟ್ಟುಕೊಳ್ಳುವುದಿರಲಿ, ಅವುಗಳನ್ನು ಓದುವ ಹವ್ಯಾಸವೇ ಇಲ್ಲವಾಗುತ್ತಿದೆ. ಈಗಿನ ವಿದ್ಯಾಥಿರ್ಗಳು ಹಲವು ಕೆಟ್ಟ ಹವ್ಯಾಸಗಳಿಂದ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾಥಿರ್ಗಳು ಓದುವ ಹವ್ಯಾಸವನ್ನು ತಪಸ್ಸಿನಂತೆ ರೂಢಿಸಿಕೊಂಡರೆ ಜೀವನ ಉಜ್ವಲವಾಗುತ್ತದೆ ಎಂದರು.
ಉಪನ್ಯಾಸಕ ಲೋಹಿಯಾ ಕೆ.ಜೆ.ಆರ್. ಸಮಾರಂಭ ಉದ್ಘಾಟಿಸಿದರು. ಕಾಲೇಜ್ನ ಪ್ರಾಂಶುಪಾಲ ಆರ್.ಎಫ್. ಅಯ್ಯನಗೌಡ್ರ ಅಧ್ಯಕ್ಷತೆ ವಹಿಸಿದ್ದರು.
ಪ್ರೇರಣಾ ಕೋಶದ ಸಂಚಾಲಕ ಡಾ. ಹನುಮಂತರಾಜು ಎನ್.ಬಿ., ಪ್ರಾಧ್ಯಾಪಕ ಡಾ. ರವಿ ಎಂ., ಡಾ. ಬಸವರಾಜ ಹುಗ್ಗಿ, ಡಾ. ನಾಗರಾಜ ಗೋಡಿಹಾಳ, ಪ್ರೊ. ರವಿಕುಮಾರ ಎಸ್.ಯು. ಮತ್ತಿತರರು ಉಪಸ್ಥಿತರಿದ್ದರು.