ರಾಜಸ್ಥಾನದಲ್ಲಿರುವ 10ನೇ ಶತಮಾನದ ಈ ಪ್ರಾಚೀನ ದೇವಸ್ಥಾನದ ವಾಸ್ತುಶಿಲ್ಪವು ಖಜುರಾಹೋ ಮತ್ತು ಕೋನಾರ್ಕ್ನ ದೇವಸ್ಥಾನಗಳನ್ನು ಹೋಲುತ್ತದೆ. ಏಳು ಕುದುರೆಗಳನ್ನು ಹೊಂದಿರುವ ಸೂರ್ಯರಥದ ರೀತಿಯಲ್ಲಿ ಕಾಣುತ್ತದೆ. ಇದಕ್ಕೆ ಚತುರ್ಭಜ ಮಂದಿರ, ಪದ್ಮನಾಭ ಮಂದಿರವೆಂದೂ ಹೆಸರಿದೆ. ದೇವಸ್ಥಾನದ ಶಿಖರವು ನೆಲದಿಂದ 96 ಅಡಿ ಎತ್ತರದಲ್ಲಿರುವುದು ವಿಶೇಷ. ಇಲ್ಲಿ 19ನೇ ಶತಮಾನದವರೆಗೂ ಚಿನ್ನದ ಸೂರ್ಯನ ವಿಗ್ರಹವಿತ್ತಂತೆ. 1857ರ ಸಿಪಾಯಿ ದಂಗೆ ವೇಳೆ ಅದನ್ನು ಅಪಹರಿಸಲಾಯಿತು ಎನ್ನುತ್ತಾರೆ ಸ್ಥಳೀಯರು. ದೇವಸ್ಥಾನದೊಳಗಿನ ಕಂಬಗಳು ಮತ್ತು ಹೊರ ಆವರಣದಲ್ಲಿನ ಕೆತ್ತನೆಗಳು ಆಕರ್ಷಕವಾಗಿವೆ.