ಶಿವಮೊಗ್ಗದಲ್ಲಿ ವಿದ್ಯಾರ್ಥಿಗೆ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರವನ್ನು ಬಿಇಒ ರಮೇಶ್ ವಿತರಿಸಿದರು. ಬಿ.ಆರ್.ಕೊಪ್ಪದ್, ರವಿ ಹಿತ್ತಲಮನಿ, ಕೆ.ಉಮೇಶ್, ಬಾಲಕೃಷ್ಣ, ರವಿಕುಮಾರ್ ಇದ್ದರು. 
ನ್ಯೂಸ್

296 ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನ

ಶಿವಮೊಗ್ಗ: ಮಕ್ಕಳು ಶಿಕ್ಷಣದ ಜತೆಗೆ ನೈತಿಕ ಶಿಕ್ಷಣ ಮೈಗೂಡಿಸಿಕೊಳ್ಳಬೇಕು ಎಂದು ಶಿವಮೊಗ್ಗ ಬಿಇಒ ರಮೇಶ್ ಸಲಹೆ ನೀಡಿದರು.

ನಗರದ ಶಿವಮೊಗ್ಗ-1 ಹಾಗೂ ಶಿವಮೊಗ್ಗ-2 ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ವೃತ್ತಿಪರ ಶಿಕ್ಷಣಕ್ಕೆ ಮಂಜೂರಾದ 296 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ ಹಾಗೂ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಶಾಲೆ ಹಾಗೂ ಮಕ್ಕಳಿಗೆ ವಿಶೇಷ ಕಾರ್ಯಕ್ರಮದ ಮೂಲಕ ಶಿಕ್ಷಣಕ್ಕೆ ಒಳ್ಳೆಯ ಕೊಡುಗೆ ನೀಡುತ್ತಿದೆ ಎಂದರು.
ಕೋಟೆ ಪೊಲೀಸ್ ಠಾಣೆ ಪಿಎಸ್‌ಐ ಬಿ.ಆರ್.ಕೊಪ್ಪದ್, ಶಿವಮೊಗ್ಗ-2 ಯೋಜನಾಧಿಕಾರಿ ರವಿ ಹಿತ್ತಲಮನಿ, ಶಿವಮೊಗ್ಗ-1 ಯೋಜನಾಧಿಕಾರಿ ಕೆ.ಉಮೇಶ್, ಎಂಐಎಸ್ ಯೋಜನಾಧಿಕಾರಿ ಬಾಲಕೃಷ್ಣ, ಪೇದೆ ರವಿಕುಮಾರ್ ಉಪಸ್ಥಿತರಿದ್ದರು.