ನ್ಯೂಸ್

ಮೊಬೈಲ್ ಬಿಟ್ಟು ಓದು ಎಂದಿದ್ದಕ್ಕೆ ಆತ್ಮಹತ್ಯೆ

ಬೆಂಗಳೂರು ಗ್ರಾಮಾಂತರ ಡೆಸ್ಕ್

ದೊಡ್ಡಬಳ್ಳಾಪುರ: ನಗರದ ರೈಲ್ವೆ ಸ್ಟೇಷನ್ ಬಳಿಯ ಸ್ಕೌಡ್ಸ್ ಕ್ಯಾಂಪ್ ರಸ್ತೆಯಲ್ಲಿ ಸದಾ ಮೊಬೈಲ್‌ನಲ್ಲಿ ಕಾಲ ಕಳೆಯುತ್ತಿದ್ದ ಮಗನಿಗೆ ಮೊಬೈಲ್ ಬಿಟ್ಟು ಓದು ಎಂದು ಬುದ್ದಿ ಮಾತು ಹೇಳಿದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಯಶಸ್ ನಾಗೇಂದ್ರ (16) ಮೃತ. ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಈತ ಓದುವುದನ್ನು ಬಿಟ್ಟು ಸದಾ ಮೊಬೈಲ್ ನೋಡುತ್ತಿದ್ದ, ಓದಿ ಕೊಳ್ಳುವಂತೆ ಪಾಲಕರು ಬುದ್ದಿವಾದ ಹೇಳಿದ್ದರು. ಪಾಲಕರ ಬುದ್ದಿ ಮಾತಿಗೆ ಮನನೊಂದು ಮನೆಯ ರೂಂನಲ್ಲಿ ನೇಣಿಗೆ ಶರಣಾಗಿದ್ದಾನೆ. ಮಗನ ಸಾವಿನ ನೋವಿನಲ್ಲೂ ಮಾನವೀಯತೆ ಮೆರೆದಿರುವ ಹೆತ್ತವರು ನೇತ್ರದಾನ ಮಾಡುವ ಮೂಲಕ ಮತ್ತೊಬ್ಬರ ಬಾಳಿನಲ್ಲಿ ಬೆಳಕಾಗಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.