ನ್ಯೂಸ್

ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

ಚಿಂತಾಮಣಿ: ನಗರದ ಹೊರವಲಯದ ಬಾಗೇಪಲ್ಲಿ ರಸ್ತೆಯ ರೈಲ್ವೆ ಅಂಡರ್​ಪಾಸ್​ ಸಮೀಪ ರೈಲಿಗೆ ತಲೆ ಕೊಟ್ಟು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಗರದ ಅಂಜನಿ ಬಡಾವಣೆ ನಿವಾಸಿ ವಿಡಿಯೋ ಮತ್ತು ೋಟೋಗ್ರಾಫರ್​ ಜಯಪ್ರಕಾಶ್​ (50) ಮೃತ. ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಜಯಪ್ರಕಾಶ್​ ಪತ್ನಿ ವಿಚ್ಛೇದನ ಪಡೆದು ಮಕ್ಕಳಿಂದ ದೂರವಾಗಿದ್ದರು. ಜತೆಗೆ ಜಯಪ್ರಕಾಶ್​ ಹಣಕಾಸಿನ ವಿಚಾರದಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.ಬೆಂಗಳೂರಿನ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಸ್ಥಳ ಪರಿಶೀಲಿಸಿ ಶವವನ್ನು ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀೆಗೆ ರವಾನಿಸಿದರು. ಮಂಗಳವಾರ ಮಧ್ಯಾಹ್ನ ನಗರದ ಹರಿಶ್ವಂದ್ರ ಘಾಟ್​ನಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.