‘ಸುಹಾನಾ ಸರ್ ಮತ್ತು ಬಿನಾಕಾ ಗೀತ್ ಮಾಲಾ’ ಕಾರ್ಯಕ್ರಮ 
ನ್ಯೂಸ್

ಸುಹಾನಾ ಸರ್ ಮತ್ತು ಬಿನಾಕಾ ಗೀತ್ ಮಾಲಾ

ಮಂಗಳೂರು: ಲಯನ್ಸ್ ಪ್ರಕೋಷ್ಠ ಹಾಗೂ ಲಯನ್ಸ್ ಜಿಲ್ಲೆ 317 ಡಿ ವತಿಯಿಂದ ಲಯನ್ಸ್ ಕ್ಲಬ್ ಮಂಗಳೂರು ಸಹಯೋಗದೊಂದಿಗೆ ‘ಸುಹಾನಾ ಸರ್ ಮತ್ತು ಬಿನಾಕಾ ಗೀತ್ ಮಾಲಾ’ ಕಾರ್ಯಕ್ರಮ ಮೇ 30ರಂದು ಸಂಜೆ 5ರಿಂದ ರಾತ್ರಿ 8.45ರವರೆಗೆ ನಗರದ ಕದ್ರಿ ಸುಜೀರ್ ಸಿ.ವಿ. ನಾಯಕ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಲಯನ್ಸ್ ಪ್ರಕೋಷ್ಠ ಜಿಲ್ಲಾಧ್ಯಕ್ಷ ಕುಂಬ್ಳೆ ನರಸಿಂಹ ಪ್ರಭು ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂಜೆ 5ಕ್ಕೆ ದಾಯ್ಜಿವರ್ಲ್ಡ್ ಸಂಪಾದಕ ವಾಲ್ಟರ್ ನಂದಳಿಕೆ ಕಾರ್ಯಕ್ರಮ ಉದ್ಘಾಟಿಸುವರು. ಲಯನ್ಸ್ ಜಿಲ್ಲೆ 317 ಡಿ ಚುನಾಯಿತ ಪ್ರಥಮ ಉಪ ಜಿಲ್ಲಾ ಗವರ್ನರ್ ಎಂ.ಗೋವರ್ಧನ್ ಶೆಟ್ಟಿ, ಉದ್ಯಮಿ ಗಿರಿಧರ್ ಪ್ರಭು, ಯೆನೆಪೋಯ ಮೆಡಿಕಲ್ ಕಾಲೇಜು ಪ್ರಾಧ್ಯಾಪಕ ಡಾ. ಕುಂಬ್ಳೆ ಅನಂತ ಪ್ರಭು, ಪ್ರಸಾದ್ ನೇತ್ರಾಲಯ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಕೂಡ್ಲು, ಮಂಗಳೂರಿನ ಜಿಎಸ್‌ಬಿ ಸೇವಾ ಸಂಘ ಅಧ್ಯಕ್ಷ ಡಾ. ಕೆ. ಮೋಹನ್ ಪೈ, ಪ್ರಮುಖರಾದ ರಾಘವೇಂದ್ರ ಕುಡ್ವ, ಕುಂಬ್ಳೆ ವ್ನಿೇಶ್ ಪ್ರಭು ಭಾಗವಹಿಸುವರು ಸುಹಾನಾ ಸರ್ ಹಳೆಯ ಹಿಂದಿ ಸಿನೆಮಾ ಹಾಡುಗಳ ಸಂಗೀತ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ 22 ಹಾಡುಗಳನ್ನು ಡಾ. ಕುಂಬ್ಳೆ ಅನಂತ ಪ್ರಭು, ಮಾಲಿನಿ ಕೇಶವ ಪ್ರಸಾದ್ ಅವರು ಇತರ ಪ್ರತಿಭಾವಂತ ಗಾಯಕರ ಜತೆ ಹಾಡಲಿದ್ದಾರೆ. ಈ ಸಂದರ್ಭ 100 ವರ್ಷಗಳನ್ನು ಪೂರೈಸಿದ ಸಿಟಿ ಬೇಕರಿ ಸಂಸ್ಥೆಯನ್ನು ಗೌರವಿಸಲಾಗುವುದು. ಕಾರ್ಯಕ್ರಮಕ್ಕೆ ಪಾಸ್ ಮೂಲಕ ಪ್ರವೇಶವಿದೆ ಎಂದರು.
ಲಯನ್ಸ್ ಕ್ಲಬ್ ಮಂಗಳೂರು ಅಧ್ಯಕ್ಷ ಎಂ. ರಾಜೇಶ್ ಕಾಮತ್, ವೆಂಕಟೇಶ್ ಬಾಳಿಗಾ ಉಪಸ್ಥಿತರಿದ್ದರು.