ನ್ಯೂಸ್

ಸುಗೂರ (ಎನ್) ಶಾಲೆಯ ಮಕ್ಕಳು ಸತತ ಮೂರನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆ


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜಿಲ್ಲಾ ಮಟ್ಟದ ಕ್ರೀಡಾಕೂಟದ ಉದ್ದ ಜಿಗಿತ, ೨೦೦ ಮೀಟರ್ ಓಟ ಹಾಗೂ ವಾಲಿಬಾಲ್ ಪಂದ್ಯದಲ್ಲಿ ನಾಲವಾರ ವಲಯದ ಸುಗೂರ (ಎನ್) ಗ್ರಾಮದ ಶ್ರೀ ಭೋಜಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ಸತತ ಮೂರನೇ ಬಾರಿಗೆ ಸ್ಟೇಟ್ ಲೆವಲï‌ಗೆ ಆಯ್ಕೆಯಾಗಿ ಸಾಧನೆ ಮೆರೆದಿದ್ದಾರೆ.
ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕ್ರೀಡಾಕೂಟದ ಉದ್ದ ಜಿಗಿತ ಹಾಗೂ ೨೦೦ ಮೀಟರ್ ಓಟದಲ್ಲಿ ಜಗಲಿಂಗ ಸಾಬಣ್ಣ ಪ್ರಥಮ, ದ್ವಿತೀಯ ಸ್ಥಾನ ಪಡೆದಿದ್ದಾನೆ. ಇನ್ನು ವಾಲಿಬಾಲ್‌ನಲ್ಲಿ ಶರಣು, ದರ್ಶನ್, ಯೋಗೇಶ ಇತರರ ತಂಡ ದ್ವಿತೀಯ ಸ್ಥಾನ ಪಡೆದಿದೆ.
ವಿದ್ಯಾರ್ಥಿಗಳ ಸಾಧನೆಗೆ ಶ್ರೀ ಭೋಜಲಿಂಗೇಶ್ವರ ಮಠದ ಪೀಠಾಧಿಪತಿ ಶ್ರೀ ಹಿರಗಪ್ಪ ತಾತಾ, ಮುಖ್ಯಗುರು ಶರಣಬಸಪ್ಪ ದೋಣಗಾಂವ್,ಶಿಕ್ಷಕರಾದ ದೇವಿಂದ್ರಪ್ಪ ದೊರೆ, ಕಾಳಿದಾಸ, ನಾಗೇಶ ತರಕಸಪೇಟ, ಬಸವರಾಜ ತರಕಸಪೇಟ, ವೆಂಕಟೇಶ ಅಲ್ಲೂರ, ಹಣಮಂತ, ಸಿಂಧು, ಮಲ್ಲಿಕಾರ್ಜುನ, ಕರಣ್, ಸಿದ್ದುಗೌಡ ಕುರಾಳ, ಗಂಗಾಧರ ಕುಂಬಾರ, ವೀರೇಶ ಶಾಸ್ತಿç, ಸಾಬಣ್ಣ ಮಲ್ಕಪ್ಪನಹಳ್ಳಿ, ರಾಜು ಚಿಗರಹಳ್ಳಿ, ಚಾಂದ್ ಪಾಶಾ ಸಂತಸ ವ್ಯಕ್ತಪಡಿಸಿದ್ದಾರೆ.