ನ್ಯೂಸ್

'ಶುಗರ್ ಫ್ಯಾಕ್ಟರಿ' ಟ್ರೇಲರ್ ರಿಲೀಸ್; ​ಶುಭಕೋರಿದ ನಟ ಪ್ರೇಮ್, ನಿಖಿಲ್ ಕುಮಾರಸ್ವಾಮಿ!

ಮೋಹನ್​ ಶೆಟ್ಟಿ

ಬೆಂಗಳೂರು: ದೀಪಕ್​ ಅರಸ್​ ನಿರ್ದೇಶನದ, ಡಾರ್ಲಿಂಗ್​ ಕೃಷ್ಣ ನಟನೆಯ 'ಶುಗರ್​ ಫ್ಯಾಕ್ಟರಿ' ಸಿನಿಮಾದ ಟ್ರೇಲರ್ ಇದೀಗ​ ಅಧಿಕೃತವಾಗಿ ಅನಾವರಣಗೊಂಡಿದ್ದು, ಸ್ಯಾಂಡಲ್​ವುಡ್​ನ ಲವ್ಲಿ ಸ್ಟಾರ್​ ಪ್ರೇಮ್​ ಮತ್ತು ನಿಖಿಲ್​ ಕುಮಾರಸ್ವಾಮಿ ಆಗಮಿಸಿ, ಟ್ರೇಲರ್ ರಿಲೀಸ್​​ ಮಾಡಿ ಶುಭಕೋರಿದ್ದಾರೆ.

ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಶುಗರ್​ ಫ್ಯಾಕ್ಟರಿ ಚಿತ್ರದ ಟ್ರೇಲರ್​ ಇದೀಗ ವೀಕ್ಷಣೆಗೆ ಲಭ್ಯವಿದ್ದು, ಆನಂದ್​ ಆಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆಗೊಂಡಿದೆ. ಲವ್ಲಿ ಸ್ಟಾರ್ ಪ್ರೇಮ್ ಹಾಗೂ ನಿಖಿಲ್ ಕುಮಾರಸ್ವಾಮಿ ಸಿನಿಮಾದ ಟ್ರೇಲರ್ ಲಾಂಚ್​ ಮಾಡಿದ್ದು, ಚಿತ್ರವು ಭರ್ಜರಿ ಯಶಸ್ವಿಯಾಗಲಿ ಎಂದು ಹಾರೈಸಿದರು.

"ಶುಗರ್ ಫ್ಯಾಕ್ಟರಿ ಎಂದರೆ ಒಂದು ಪಬ್​ನ ಹೆಸರು ಎಂದು ಮಾತು ಆರಂಭಿಸಿದ ನಿರ್ದೇಶಕ ದೀಪಕ್ ಅರಸ್, ಚಿತ್ರದಲ್ಲಿ ಪಬ್ ಕೂಡ ಒಂದು ಪಾತ್ರ ಹಾಗಾಗಿ ನಮ್ಮ ಚಿತ್ರಕ್ಕೆ "ಶುಗರ್ ಫ್ಯಾಕ್ಟರಿ" ಎಂದು ಹೆಸರಿಟ್ಟಿದ್ದೇವೆ‌.

ಹಾಗಂತ ನಮ್ಮ ಚಿತ್ರದಲ್ಲಿ ಬರಿ ಹಾಡು, ಕುಣಿತ, ಕುಡಿತ ಅಷ್ಟೇ ಇಲ್ಲ. ಇದೊಂದು ಸುಮಧುರ ಪ್ರೇಮ ಕಾವ್ಯ ಕೂಡ. ಆಕ್ಷನ್ ಹಾಗೂ ಸೆಂಟಿಮೆಂಟ್ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗುತ್ತದೆ. ಒಟ್ಟಿನಲ್ಲಿ ಈಗಿನ ಜನತೆ ಯಾವ ಮನೋರಂಜನೆ ಬಯಸುತ್ತಾರೊ ಅದೆಲ್ಲವೂ ನಮ್ಮ ಚಿತ್ರದಲ್ಲಿದೆ" ಎಂದು ಹೇಳಿದರು.