ಬೆಂಗಳೂರು: ‘ಗೌರಿ’ ಸಿನಿಮಾ ಶೀಘ್ರವೇ ರಿಲೀಸ್ ಆಗಲಿದೆ. ಈ ಚಿತ್ರದ ಮೂಲಕ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಮಗ ಸಮರ್ಜಿತ್ ಲಂಕೇಶ್ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಅವರು ಸುದೀಪ್ ಅವರನ್ನು ಸಂದರ್ಶನ ಮಾಡಿದ್ದಾರೆ. ಇದರಲ್ಲಿ ಹಲವು ರೀತಿಯ ಪ್ರಶ್ನೆಗಳನ್ನು ಅವರು ಸುದೀಪ್ಗೆ ಕೇಳಿದ್ದಾರೆ. ಈ ವೇಳೆ ಅವರು ಯಾರಿಗೆ ಬಾಸ್ ಎನ್ನುತ್ತೇವೆ ಎನ್ನುವ ಕುರಿತಾಗಿ ಮಾತನಾಡಿದ್ದಾರೆ.
ʻಗೌರಿ’ ಸಿನಿಮಾ ಶೀಘ್ರವೇ ರಿಲೀಸ್ ಆಗಲಿದೆ. ಈ ಚಿತ್ರದ ಮೂಲಕ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಮಗ ಸಮರ್ಜಿತ್ ಲಂಕೇಶ್ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಸಮರ್ಜಿತ್ ಲಂಕೇಶ್ ಅವರು ಕಿಚ್ಚ ಸುದೀಪ್ ಅವರಿಗೆ ಸಂದರ್ಶನ ಮಾಡಿದ್ದರು.
ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಸುದೀಪ್ ಮಾತನಾಡಿ. ‘ನನ್ನ ನೆಚ್ಚಿನ ಕಲಾವಿದರು ನೀವು, ನಿಮ್ಮ ನೆಚ್ಚಿನ ಕಲಾವಿದರು ಯಾರು?’ ಎಂದು ಕೇಳಿದರು ಸಮರ್ಜಿತ್ ಲಂಕೇಶ್. ಇದಕ್ಕೆ ಸುದೀಪ್ ಅವರು ಉತ್ತರ ನೀಡಿದ್ದಾರೆ. ‘ನನ್ನ ಫೇವರಿಟ್ ಹೀರೋ ವಿಷ್ಣು ಸರ್. ಇದನ್ನು ಸಾಕಷ್ಟು ಬಾರಿ ಹೇಳಿದ್ದೇನೆ. ಜೀವನದಲ್ಲಿ ನಾನು ಇಬ್ಬರಿಗೆ ಮಾತ್ರ ಬಾಸ್ ಎಂದು ಕರೆದಿದ್ದು. ನಮ್ಮ ತಂದೆಗೆ, ಅದನ್ನು ಇವತ್ತಿಗೂ ಕರೆಯುತ್ತೇನೆ. ಹಾಗೂ ವಿಷ್ಣು ಸರ್ಗೆ. ವಿಷ್ಣು ಅವರ ಪರ್ಸನಾಲಿಟಿ ಸಖತ್ ಇಷ್ಟ. ಅವರ ಗತ್ತು, ಇರೋ ರೀತಿ ಸಖತ್ ಇಷ್ಟ. ಅವರು ಯಾವಾಗಲೂ ನನ್ನ ಫೇವರಿಟ್. ಹಾಗೇ ನನ್ನ ತಂದೆ ಕೂಡ. ಇವರಿಬ್ಬರಿಗೆ ನಾನು ಬಾಸ್ ಎಂದು ಕರೆಯುವುದುʼʼಎಂದಿದ್ದಾರೆ ಸುದೀಪ್.
ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ.