ಬೆಂಗಳೂರು: ಸ್ಯಾಂಡಲ್ವುಡ್ ನಟ ಸುದೀಪ್ ನಟನೆಯ ಬಹುನಿರೀಕ್ಷಿತ ಸಿನಿಮಾ ಮ್ಯಾಕ್ಸ್ ( Max Movie). ಈ ಸಿನಿಮಾದಿಂದ ದೊಡ್ಡ ಅನೌನ್ಸ್‌ಮೆಂಟ್‌ಗೆ ದಿನಗಣನೆ ಶುರುವಾಗಿದೆ. ಇದೇ ನವೆಂಬರ್ 27ರಂದು ಮ್ಯಾಕ್ಸ್ ಚಿತ್ರದ ಕುರಿತಾಗಿ ಬಿಗ್ ಅನೌನ್ಸ್‌ಮೆಂಟ್ ಮಾಡಲಿದೆ ಚಿತ್ರತಂಡ.
ಮ್ಯಾಕ್ಸ್ ಸಿನಿಮಾ ತಂಡದಿಂದ ಬಹು ಮುಖ್ಯ ಘೋಷಣೆಯೊಂದನ್ನು ಮಾಡುವುದಾಗಿ ಚಿತ್ರತಂಡ ಪೋಸ್ಟರ್ವೊಂದನ್ನು ಬಿಡುಗಡೆ ಮಾಡಿದೆ. ಅಲ್ಲದೇ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಬಾಲಿವುಡ್ನ ಟಾಪ್ B4U Motion Pictures ಹಕ್ಕುಗಳನ್ನು ಪಡೆದುಕೊಂಡಿದೆ.
ಇದೇ ತಿಂಗಳ 27 ರಂದು ಡೇಟ್ ಫಿಕ್ಸ್ ಮಾಡಿದೆ. ಆದರೆ, ಈ ದಿನ ಏನು ಘೋಷಣೆ ಮಾಡುತ್ತದೆ ಅನ್ನೋದು ಮಾತ್ರ ಹೇಳಿಕೊಂಡಿಲ್ಲ. ಬದಲಾಗಿ, 27 ರಂದು ರೆಡಿ ಆಗಿರಿ, ಈ ದಿನ ಮ್ಯಾಕ್ಸ್ ಚಿತ್ರದ ಬಿಗ್ ಅನೌನ್ಸ್‌ಮೆಂಟ್ ಇದೆ ಅಂತ ಮಾತ್ರ ಹೇಳಿದೆ. ಟೈಮ್ ಕೂಡ ಇನ್ನು ರಿವೀಲ್ ಮಾಡಿಲ್ಲ ನೋಡಿ.
ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ, ಕಲೈಪುಲಿ ಎಸ್ ಥಾನು, ವಿ ಕ್ರಿಯೇಷನ್ಸ್ ಬ್ಯಾನರ್ ಮತ್ತು ಕಿಚ್ಚ ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.
ಈ ಸಿನಿಮಾದಲ್ಲಿ ಕಿಚ್ಚ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಸೇರಿ ಇನ್ನೂ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡದ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಮ್ಯಾಕ್ಸ್ ಸಿನಿಮಾ ಆಗಲಿದೆ. ಬಹುತೇಕ 2025ರ ಯುಗಾದಿ ಹಬ್ಬದ ಪ್ರಯುಕ್ತ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.