ಬೆಂಗಳೂರು: ( Big Boss Finale ) ಕನ್ನಡದ ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅತಿ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಪಡೆದಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ಯಶಸ್ವಿಯಾಗಿ ಪೂರ್ಣಗೊಂಡಿದೆ. ಹನುಮಂತ ಸೀಸನ್ 11ರ ವಿನ್ನರ್ ಆಗಿ ಹೊರ ಹೊಮ್ಮಿದ್ದು, ತ್ರಿವಿಕ್ರಮ್ ರನ್ನರ್ ಆಪ್ ಆಗಿದ್ದಾರೆ. ಈ ಕಾರ್ಯಕ್ರಮದ ಸೂತ್ರಧಾರಿಯಾಗಿದ್ದ ಸುದೀಪ್ ಅವರಿಗೆ ಬಿಗ್ಬಾಸ್ ತಂಡ ಒಂದು ಸಾಂಗ್ ಅರ್ಪಣೆ ಮಾಡಲಾಗಿದೆ.
ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರ 11 ವರ್ಷದ ಜರ್ನಿಗೆ ಬಿಗ್ಬಾಸ್ ತಂಡ ಡ್ಯಾನ್ಸ್ ಮೂಲಕ ಗಿಫ್ಟ್ವೊಂದನ್ನು ಕೊಟ್ಟಿದ್ದಾರೆ. ಬಿಗ್ಬಾಸ್ ( Big Boss Finale ) ವೇದಿಕೆ ಮೇಲೆ ಸುದೀಪ್ ಭಾವುಕರಾಗಿದ್ದಾರೆ.
ಸುದೀಪ್ ಅವರಿಗಾಗಿ ನಿರ್ದೇಶಕ ಯೋಗರಾಜ್ ಭಟ್ ಅವರು ಅಮ್ಮನಿಗಾಗಿ ಹಾಡನ್ನು ಬರೆದಿದ್ದಾರೆ. ಅಮ್ಮನ ಪೋಷನ್ಗೆ ಧ್ವನಿ ಕೊಟ್ಟಿದ್ದು ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ. ಯೋಗರಾಜ್ ಭಟ್ ಅವರು ಬರೆದ ಅಮ್ಮನ ಹಾಡಿಗೆ ಧ್ವನಿ ಕೊಟ್ಟಿದ್ದು ಸ್ಟಾರ್ ಗಾಯಕ ವಾಸುಕಿ ವೈಭವ್. ಕಿಚ್ಚ ಸುದೀಪ್ ಅವರ ಅಮ್ಮನಿಗಾಗಿ ವೇದಿಕೆ ಮೇಲೆ ಅದ್ಭುತವಾಗಿ ಡ್ಯಾನ್ಸ್ ಪರ್ಫಾರ್ಮೆನ್ಸ್ ನೀಡುವ ಮೂಲಕ ನಮನವನ್ನು ಸಲ್ಲಿಸಲಾಗಿತ್ತು. ಈ ವೇಳೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ಯುವನ್ ಕುಮಾರ್ ಬಾಲ್ಯದ ಕಿಚ್ಚ ಸುದೀಪ್ ಆಗಿ ಡ್ಯಾನ್ಡ್ ಮಾಡಿದ್ದಾರೆ.
ಯುವನ್ ಕುಮಾರ್ ಡ್ಯಾನ್ಸ್ ಮೆಚ್ಚಿದ ಕಿಚ್ಚ ಸುದೀಪ್ ಅವರು ತಾವು ಧರಿಸಿದ್ದ ಬೆಲೆ ಬಾಳುವ ಪ್ಲಾಟಿನಂ ಚೈನ್ ಅನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ಕಿಚ್ಚನಿಂದ ಪ್ಲಾಟಿನಂ ಚೈನ್ ಗಿಫ್ಟ್ ಆಗಿ ಪಡೆದ ಡ್ಯಾನ್ಸರ್ ಯುವನ್ ಕುಮಾರ್ ಫುಲ್ ಖುಷ್ ಆಗಿದ್ದಾನೆ.
ಕಿಚ್ಚ ಸುದೀಪ್ ಅವರು ಸೀಸನ್ 11 ನನ್ನ ಕೊನೆಯ ಬಿಗ್ಬಾಸ್ ಶೋ ಅಂತ ಘೋಷಣೆ ಮಾಡಿದ್ದಾರೆ. ಹೀಗಾಗಿ ಕಟ್ಟ ಕಡೆಯ ಬಿಗ್ ಬಾಸ್ ಶೋ ವೇಳೆ ಕಿಚ್ಚ ಸುದೀಪ್ ಕಣ್ಣೀರು ಹಾಕಿದ್ದಾರೆ.