ನ್ಯೂಸ್

Sudeep​ ಬಿಗ್​ಬಾಸ್​​ ತೊರೆದಿದ್ದು ಇವ್ರೊಬ್ಬರಿಗೆ ಮಾತ್ರ ಸಖತ್​ ಖುಷಿ ಕೊಟ್ಟಿದೆ! ಇವ್ರ ಸಂತೋಷಕ್ಕೆ ಪಾರವೇ ಇಲ್ಲ..

ಬೆಂಗಳೂರು:  ಖಾಸಗಿವಾಹಿಯಲ್ಲಿ ಪ್ರಸರವಾಗುತ್ತಿರುವ ಬಿಗ್​ಬಾಸ್​​ ಕಾರ್ಯಕ್ರಮ  ಹೆಚ್ಚಿನ ಜನಮನ್ನಣೆ ಪಡೆದರಿರುವ ಕಾರ್ಯಕ್ರಮವಾಗಿ ಮನ್ನಣೆ ಪಡೆಯುತ್ತಿದೆ. ತಮಿಳು. ತೆಲಗು, ಹಿಂದಿ, ಕನ್ನಡ ಭಾಷೆಯಲ್ಲಿ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮಕ್ಕೆ ವೀಕ್ಷಕರಿಂದ ಉತ್ತಮ ಪ್ರತಿಕ್ರೀಯೆ ಕೂಡಾ ದೊರೆಯುತ್ತಿದೆ.  ಕಿಚ್ಚ ಸುದೀಪ್ ( Sudeep​ )​​ ಸಾರಥ್ಯದಲ್ಲಿ ನಡೆಯುತ್ತಿರುವ ಬಿಗ್​ಬಾಸ್ ಕನ್ನಡ​ ಸೀಸನ್​​ 11ಗೆ  9.9 ಟಿಆರ್​ಪಿ ಬಂದಿದೆ ಎಂದು ಬಿಗ್​ಬಾಸ್​ ತಂಡ ಘೋಷಿಸಿದ್ದ ಬೆನ್ನಲ್ಲೇ ಇದೀಗ ಸುದೀಪ್​ ಕೂಡಾ ಮುಂದಿನ ಸೀಸನ್​ಗೆ ತಾವು ನಿರೂಪಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಸುದೀಪ್​ ಅವರ ಟ್ವೀಟ್​​ನಲ್ಲಿ ಏನಿದೆ?: 

‘ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಕ್ಕೆ ನಿಮಗೆಲ್ಲ ಧನ್ಯವಾಗಳು. ಸಿಕ್ಕಿರುವ ಟಿಆರ್​ಪಿ ನೋಡಿದರೆ ನನ್ನ ಬಗ್ಗೆ ಮತ್ತು ಈ ಶೋ ಬಗ್ಗೆ ನೀವು ತೋರಿಸಿ ಪ್ರೀತಿ ಏನೆಂಬುದು ತಿಳಿಯುತ್ತದೆ. ಈ 10 ಪ್ಲಸ್​ 1 ವರ್ಷ ನಿಮ್ಮೊಂದಿಗೆ ಪಯಣ ಮಾಡಿದ್ದು ಚೆನ್ನಾಗಿತ್ತು. ಈಗ ನಾನು ಬೇರೆ ಕಡೆಗೆ ಗಮನ ಹರಿಸುವ ಸಮಯ ಬಂದಿದೆ. ನಿರೂಪಕನಾಗಿ ಇದು ನನ್ನ ಕೊನೆಯ ಬಿಗ್​ ಬಾಸ್​. ಇಷ್ಟು ವರ್ಷಗಳ ಕಾಲ ಬಿಗ್​ ಬಾಸ್​ ಕಾರ್ಯಕ್ರಮವನ್ನು ನೋಡಿ ನೀವು ಮತ್ತು ಕಲರ್ಸ್​ನವರು ನನ್ನ ನಿರ್ಧಾರವನ್ನು ಗೌರವಿಸುತ್ತೀರಿ ಎಂದು ನಂಬಿದ್ದೇನೆ. ಈ ನಿರ್ಧಾರ ಅತ್ಯುತ್ತಮ ಆಗುವಂತೆ ಮಾಡೋಣ. ನಿಮ್ಮೆಲ್ಲರನ್ನೂ ನಿಮ್ಮನ್ನು ಮನರಂಜಿಸುತ್ತೇನೆ’ ಎಂದು ಸುದೀಪ್​ ಅವರು ಶಾಕಿಂಗ್​ ವಿಷಯ ತಿಳಿಸಿದ್ದಾರೆ.

ಸೋಶಿಯಲ್ ಮೀಡಿಯಾ ಮೂಲಕ ಅವರು ಅಧಿಕೃತವಾಗಿಯೇ ಇನ್ಮುಂದಿನ ದಿನಗಳಲ್ಲಿ ಬಿಗ್​ಬಾಸ್​ ನಿರೂಪಣೆ ತಾವು ಮಾಡುವುದಿಲ್ಲ ಎನ್ನುವ  ನಿರ್ಧಾರ ತಿಳಿಸಿದ್ದಾರೆ. ಅವರ ಈ ಪೋಸ್ಟ್ ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ಆದರೆ ಈ ಪೋಸ್ಟ್​​ ವೈರಲ್​ ಆಗುತ್ತಿದ್ದ ಬೆನ್ನಲ್ಲೇ ಇದೀಗ ಸುದೀಪ್​​ ಅವರ ಈ ನಿರ್ಧಾರಕ್ಕೆ ಕೆಲವರು ಸಂತೋಷ ಪಟ್ಟಿದ್ದಾರೆ. ಬಿಗ್​ಬಾಸ್​ ವೀಕ್ಷಕರಿಗೆ ಈ  ವಿಚಾರವಾಗಿ ಸಖತ್​ ಬೇಸರ ಕೂಡಾ ಉಂಟಾಗಿದೆ.

ಬಿಗ್​ಬಾಸ್​​ ಆರಂಭದಿಂದ ನಿರೂಪಣೆ ಮಾಡುತ್ತಾ ಕಾರ್ಯಕ್ರಮವನ್ನು ಚೆಂದಗಾಣಿಸಿ  ಕೊಡುತ್ತಿದ್ದ ಕೀರ್ತಿ ಕಿಚ್ಚ ಅವರಿಗೆ ಸಲ್ಲುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಬಿಗ್​ಬಾಸ್​​ ಸೀಸನ್​​ 10ರ ಕೊನೆಯ ಸಂಚಿಕೆಯಲ್ಲಿಯೇ ಕಿಚ್ಚ ಇನ್ಮುಂದೆ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಹಿಂಟ್​​ ಕೂಡಾ ಕೊಟ್ಟಿದ್ದರು.  ಈ ವರ್ಷ ಬಿಗ್​ಬಾಸ್​​ ಕಾರ್ಯಕ್ರಮ ಸೀಸನ್​ 11 ಪ್ರಾರಂಭವಾಗುವಾಗ  ಕಿಚ್ಚನ ಜಾಗದಲ್ಲಿ ನಿಂತು ಯಾರು ನಿರೂಪಣೆ  ಮಾಡುತ್ತಾರೆ ಎನ್ನುವ ಪ್ರಶ್ನೆ ಕೂಡಾ ಮುನ್ನೆಗೆ ಬಂದಿತ್ತು. ಕಿಚ್ಚ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಮಾತು ಕೂಡಾ ಕೇಳಿ ಬಂದಿತ್ತು. ಇನ್ನೇನು ಕಾರ್ಯಕ್ರಮ ಪ್ರಾರಂಭವಾಗಲು ಕೆಲವು ದಿನಗಳು ಬಾಕಿ ಇರುವಾಗ ಕಿಚ್ಚ ಮತ್ತೆ ಬಿಗ್​ಬಾಸ್​​ನಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಆಗಿತ್ತು.

 ಬಿಗ್​ಬಾಸ್​​ ಕಾರ್ಯಕ್ರಮ ಒಳ್ಳೆಯ ಆರಂಭವನ್ನು ಪಡೆದುಕೊಂಡು ಸೂಪರ್​​ ಹಿಟ್​​ ಕಾರ್ಯಕ್ರಮವಾಗಿ ಹೊರ  ಹೊಮ್ಮುತ್ತಿದೆ. ಆದರೆ ಬಿಗ್​ಬಾಸ್​​ ಪ್ರಾರಂಭವಾಗಿ 2 ವಾರಕ್ಕೆ ಕಿಚ್ಚ ಮುಂದಿನ  ಸೀಸನ್​​ನಲ್ಲಿ ತಾವು ನಿರೂಪಣೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿರುವುದು ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

 ಬಿಗ್​ಬಾಸ್​​ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೂಪೇಶ್​ ರಾಜಣ್ಣ:

ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿರುವ ರೂಪೇಶ್ ರಾಜಣ್ಣ.. ಕೆಲವರ ಆಟಕ್ಕೆ ಕಿಚ್ಚ ಸುದೀಪ್ ಬಿಗ್​ಬಾಸ್ ನಿರೂಪಕರಾಗಿ ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನವನ್ನು ಸಹಿಸಲ್ಲ. ಎ ಮುಂಬೈ ಮರಾಠಿ ಹಾಗೂ ತಮಿಳ್ ನಿರ್ದೇಶಕ ಮೊದಲು ಬಿಗ್​ಬಾಸ್ ಬಿಡಿ, ಇಲ್ಲ ಬಿಗ್​ಬಾಸ್ ನಿಲ್ಲಬೇಕು. ಅಸಲಿ ವಿಷಯ ಮಾತಾಡ್ತೀನಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

 ಕಿಚ್ಚನ ನಿರ್ಧಾರಕ್ಕೆ ಅಭಿಮಾನಿಗಳು ಫುಲ್​​ ಖುಷ್​

ಕಿಚ್ಚ ಸುದೀಪ್​ ಅವರು ಬಿಗ್​ಬಾಸ್​​ ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿ ಹೊತ್ತುಕೊಂಡ ದಿನದಿಂದಲೂ ಸಿನಿಮಾಗಳಿಗೆ ಹೆಚ್ಚಿನ ಆದ್ಯತೆ ನೀಡಲು ಕೊಂಚ ಕಷ್ಟವಾಗಿದೆ. ಹೀಗಾಗಿ ವರ್ಷಕ್ಕೆ ಒಂದು ಸಿನಿಮಾ ಮಾಡುವುಕ್ಕೂ ಸಮಯ ಸಿಗದಂತೆ ಆಗಿದೆ. ವಾರದಲ್ಲಿ ಹೆಚ್ಚಿನ ಸಮಯ ಬಿಗ್​ಬಾಸ್​​ಗಾಗಿಯೇ ಇಡ ಬೇಕಾಗಿದೆ. ಹೀಗಾಗಿ  ಕಿಚ್ಚನ ಸಿನಿಮಾ ಮಾಡುವುದು ಕಡಿಮೆ  ಆಗಿದೆ ಎನ್ನುವ ಮಾತು ಅಭಿಮಾನಿಗಳಲ್ಲಿದೆ.

 ಕಿಚ್ಚ ಸುದೀಪ್​​ ಅವರು ಇನ್ಮುಂದೆ ಬಿಗ್​ಬಾಸ್​ ನಿರೂಣೆ ಮಾಡುವುದಿಲ್ಲ ಎನ್ನುವ ಮಾತು ಯಾರಿಗೆ ಎಷ್ಟು ಬೇಸರ ತಂದಿದ್ಯೋ ಗೊತ್ತಿಲ್ಲ. ಆದರೆ ಕಿಚ್ಚನ ಫ್ಯಾನ್ಸ್​​ ಮಾತ್ರ ಸಖತ್​ ಖುಷಿಯಾಗಿದ್ದಾರೆ.  ಇನ್ಮುಂದೆ ಕಿಚ್ಚ ಸಿನಿಮಾಗಳಿಗೆ ಹೆಚ್ಚು ಸಮಯ ಕೊಡುತ್ತಾರೆ. ವರ್ಷಕ್ಕೆ ಒಮ್ಮೆ ಆದ್ರೂ ತೆರೆ ಮೇಲೆ ನಾವು ನೆಚ್ಚಿನ ನಟನನ್ನು ನೋಡಬಹುದು ಎಂದು ಕುಣಿದು ಕುಪ್ಪಳಿಸುತ್ತಿದ್ದಾರೆ.

 ಆದರೆ ಇತ್ತ ಬಿಗ್​ಬಾಸ್​​ ವೀಕ್ಷಕರು ಕಿಚ್ಚನ ಸಂಚಿಕೆ ನೋಡಲು ವೀಕೆಂಡ್​ನಲ್ಲಿ ಮಿಸ್​ ಮಾಡಿಕೊಳ್ಳುವುದು ಪಕ್ಕಾ ಹೌದು. ಸುದೀಪ್​ ಅವರು ಇಲ್ಲದೆ ಬಿಗ್​ಬಾಸ್​​ ಕಾರ್ಯಕ್ರಮವೇ ಇಲ್ಲ ಎಂದು ಸೋಶಿಯಲ್​​ ಮೀಡಿಯಾದಲ್ಲಿ ಕಾಮೆಂಟ್​​ ಮಾಡುತ್ತಿದ್ದಾರೆ.