ನ್ಯೂಸ್

ದಿಢೀರ್ ಕದನ ವಿರಾಮ ೋಷಣೆ ಪ್ರಶ್ನಾರ್ಹ: ಸಚಿವ ಸಂತೋಷ ಲಾಡ್ ಅಭಿಮತ | Youth must rise voice

ಬೆಂಗಳೂರು: ಪಾಕಿಸ್ತಾನದ ಜತೆಗೆ ಕದನ ವಿರಾಮಕ್ಕೆ ಅಭ್ಯಂತರವಿಲ್ಲ, ದಿಢೀರ್ ೋಷಣೆ ಯಾಕೆ ಎಂದು ಗೊತ್ತಿಲ್ಲ. ಆದರೆ ಅಮೆರಿಕ ಅಧ್ಯಕ್ಷ ಟ್ರಂಪ್ ನೀಡಿದ ಹೇಳಿಕೆ ತಪ್ಪು ಸಂದೇಶ ರವಾನಿಸಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸಪ್ತ ಸಚಿವರ ವಸತಿ ಗೃಹದಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಉಗ್ರರ ಕೃತ್ಯದ ವಿರುದ್ಧ ರೊಚ್ಚಿಗೆದ್ದ ಯುವ ಜನರು ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಒತ್ತಾಯಿಸಿದರು. ಅದೇ ರೀತಿ ಟ್ರಂಪ್ ಹೇಳಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಲಿ ಎಂದರು.

ಬಿಜೆಪಿಯವರು ತಿರಂಗಾ ಯಾತ್ರೆ ನಡೆಸಿದ್ದಾರೆ. ಅದರ ಬದಲಿಗೆ ಟ್ರಂಪ್ ಯಾತ್ರೆ ನಡೆಸಬೇಕಾಗಿತ್ತು ಎಂದು ಛೇಡಿಸಿದ ಸಂತೋಷ್ ಲಾಡ್, ಪಹೆಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರನ್ನು ಉಗ್ರರು ಹತ್ಯೆ ಮಾಡಿದ ಬಳಿಕ ದೇಶದಲ್ಲಿ ನಡೆದ ಬೆಳವಣಿಗೆಗಳು ಅನೇಕ ಪ್ರಶ್ನೆಗಳನ್ನು ಹುಟ್ಟಿ ಹಾಕಿವೆ ಎಂದರು.

ಮೋದಿ ಧೋರಣೆಗೆ ಆಕ್ಷೇಪ

ಈ ದುರ್ಘಟನೆ ಬಳಿಕ ಸೌದಿ ಪ್ರವಾಸ ಮೊಟುಕುಗೊಳಿಸಿದ ಪ್ರಧಾನಿ ಮೋದಿಯವರು, ದೇಶಕ್ಕೆ ವಾಪಸ್ಸಾದವರು ನೇರ ಬಿಹಾರ ಚುನಾವಣೆ ಪ್ರಚಾರಕ್ಕೆ ಹೋದರು. ನಂತರ ಕರೆದ ಸರ್ವಪಕ್ಷಗಳ ಸಭೆಯಲ್ಲೂ ಭಾಗವಹಿಸಲಿಲ್ಲ.

ಭಯೋತ್ಪಾದಕರು ಮತ್ತು ಅವರನ್ನು ಸದೆಬಡಿಯಲೆಂದು ಶುರುವಾದ ಆಪರೇಷನ್ ಸಿಂಧೂರ ಕಾರ್ಯಾಚರಣೆ ದಿಢೀರ್‌ನೆ ನಿಲ್ಲಿಸಲಾಯಿತು. ಕದನ ವಿರಾಮದ ಬಗ್ಗೆ ಮುಂಚಿತವಾಗಿ ಟ್ರಂಪ್ ನೀಡಿದ ಹೇಳಿಕೆಗಳು ಅನೇಕ ಪ್ರಶ್ನೆಗಳನ್ನು ಹುಟ್ಟಿ ಹಾಕಿವೆ ಎಂದರು.

ಮೋದಿಯವರಿಗೆ ಒಳ್ಳೆಯ ಬೆಂಬಲ ಸಿಕ್ಕಿತ್ತು. ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯಬೇಕಾಗಿತ್ತು. ಹಾಗೆ ಮಾಡಲೇ ಇಲ್ಲ. ಟ್ರಂಪ್ ಹೇಳಿದ ತಕ್ಷಣ ನಿಲ್ಲಿಸುತ್ತಾರೆ. ಹಿಂದೆ ಹಲವರು ಮನಮೋಹನ್‌ಸಿಂಗ್ ಸೇರಿ ಹಿಂದಿನ ಹಲವು ಪ್ರಧಾನಿಗಳು ಕಠಿಣ ನಿರ್ಧಾರ ಕೈಗೊಂಡು, ಯಾರ ಒತ್ತಡಕ್ಕೂ ಮಣಿದಿರಲಿಲ್ಲ ಎಂದು ಸಂತೋಷ್ ಲಾಡ್ ಹೇಳಿದರು.