Plane Crashes:ಸುಡಾನ್ ಮಿಲಿಟರಿ ಸಾರಿಗೆ ವಿಮಾನವೊಂದು ಮಂಗಳವಾರ ತಡರಾತ್ರಿ ಜನವಸತಿ ಪ್ರದೇಶದಲ್ಲಿ ಪತನವಾದ ಪರಿಣಾಮ 46 ಮಂದಿ ಮೃತಪಟ್ಟಿದ್ದಾರೆ ಎಂದು ಸುದ್ದಿಸಂಸ್ಥೆ ಎಎಫ್ಸಿ ವರದಿ ಮಾಡಿದೆ.
ಇದನ್ನೂ ಓದಿ: Gigangadhareshwara Temple | ಶಿವರಾತ್ರಿಯಂದು ಗವಿಗಂಗಾಧರೇಶ್ವರ ದೇವಸ್ಥಾನದ ಒಳಾಂಗಣದಲ್ಲಿ ವ್ಯವಸ್ಥೆ ಹೇಗಿದೆ ನೋಡಿ…!
ಮೃತರ ಸಂಖ್ಯೆ 46ಕ್ಕೆ ಏರಿಕೆಯಾಗಿದ್ದು, 10 ಮಂದಿ ಗಂಭೀರ ಗಾಯಗಳಾಗಿವೆ ಎಂದು ಖಾರ್ಟೌಮ್ ಪ್ರಾದೇಶಿಕ ಸರ್ಕಾರದ ಮಾಧ್ಯಮ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ ಎಂದು ವರದಿ ಉಲ್ಲೇಖಿಸಿದೆ.
ರಾಜಧಾನಿ ಖಾರ್ಟೌಮ್‌ನ ವಾಯುವ್ಯದಲ್ಲಿರುವ ಓಮ್‌ದುರ್ಮನ್‌ನಲ್ಲಿರುವ ಈ ನೆಲೆಯು ಸೇನೆಯ ಅತಿದೊಡ್ಡ ಮಿಲಿಟರಿ ಕೇಂದ್ರಗಳಲ್ಲಿ ಒಂದಾಗಿದೆ.
ಮಕ್ಕಳು ಸೇರಿದಂತೆ ಗಾಯಗೊಂಡ ನಾಗರಿಕರನ್ನು ತುರ್ತು ರಕ್ಷಣಾ ಸಿಬ್ಬಂದಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಸೇನೆಯೊಂದಿಗಿನ ಸಂಯೋಜಿತ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ತಾಂತ್ರಿಕದೋಷದಿಂದ ಸೇನಾ ವಿಮಾನವು ಅಪಘಾತಕ್ಕಿಡಾಗಿದೆ ಎಂದು ಹೇಸರೇಳಚ್ಚಿಸಿದ ಅಧಿಕಾರಿ ಮಾಹಿತಿ ಹೊರ ಹಾಕಿದ್ದಾರೆ.
ಅಪಘಾತದ ವೇಳೆ ಡೊಡ್ಡ ಶಬ್ಧ ಕೇಳಿ ಬಂದಿದ್ದು, ವಿಮಾನಪತನಕ್ಕೆ ಹಲವು ಮನೆಗಳು ಹಾನಿಯಾಗಿವೆ ಎಂದು ಸ್ಥಳೀಯರು ವಿವರಿಸಿದ್ದಾರೆ.(ಏಜೆನ್ಸೀಸ್)