ಅರಸೀಕೆರೆ ಗ್ರಾಮಾಂತರ ತಾಲೂಕಿನ ಜೀವ ವಿಮಾ ಕಚೇರಿಯಲ್ಲಿ ವಿಮಾ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಡಾ. ಶಿವಕುಮಾರ್, ತಹಸೀಲ್ದಾರ್ ಸಂತೋಷ್‌ಕುಮಾರ್, ಶಾಕಾ ಪ್ರಬಂಧಕ ಋಷಿ ಚರಣ್ ಇದ್ದರು 
ನ್ಯೂಸ್

ಛಾಪು ಮೂಡಿಸಿದಲ್ಲಿ ಮಾತ್ರ ಸಫಲತೆ ಕಾಣಲು ಸಾಧ್ಯ

ಅರಸೀಕೆರೆ ಗ್ರಾಮಾಂತರ: ಪ್ರಸ್ತುತ ದಿನಗಳಲ್ಲಿ ವೈಭವೀಕರಿಸಿದಂತೆ ಜನರು ನಡುವೆ ತಮ್ಮ ಚಾಪು ಮೂಡಿಸಿದಾಗ ಹೆಚ್ಚು ಹೆಚ್ಚು ವಿಮಾ ವ್ಯವಹಾರ ಮಾಡುವಲ್ಲಿ ಪ್ರತಿನಿಧಿಗಳು ಸಫಲತೆ ಕಾಣಲು ಸಾಧ್ಯ ಎಂದು ತಹಸೀಲ್ದಾರ್ ಸಂತೋಷ್‌ಕುಮಾರ್‌ವಿಮಾ ಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು.

ಅರಸೀಕೆರೆ ಭಾರತೀಯ ಜೀವ ವಿಮಾ ನಿಗಮದ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ವಿಮಾ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿಮಾ ಪ್ರತಿನಿಧಿಗಳು ಭಾರತದಲ್ಲೆ ಅರಸೀಕೆರೆ ಶಾಖೆಯಲ್ಲಿ ಉತ್ತಮ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ತಜ್ಞ ವೈದ್ಯ ಶಿವಕುಮಾರ್ ಮಾತನಾಡಿ, ಯಾರಾದರೂ ಜೀವ ವಿಮೆ ಮಾಡಿಸಿದ್ದೆ ಆದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವ ರಕ್ಷಣೆ ಹಾಗೂ ನಮ್ಮನ್ನು ನಂಬಿದ ವ್ಯಕ್ತಿಗಳಿಗೆ ಸಹಕಾರ ಆಗಲಿದೆ. ಇಂದಿನ ಪ್ರತಿನಿಧಿಗಳ ಪೈಕಿ ಮಹಿಳೆಯರು ಹೆಚ್ಚು ಇರುವುದು ಪ್ರಶಂಶನಿಯ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಖಾ ಪ್ರಬಂಧಕ ಋಷಿ ಚರಣ್ ಮಾತನಾಡಿ, ಸೆ.12 ರಂದು ನಮ್ಮ ಶಾಖೆಗೆ ನಮ್ಮ ಸಂಸ್ಥೆಯ ವ್ಯವಸ್ಥಾಪಕ ಸಂಚಾಲಕರು ಭೇಟಿ ನೀಡಲಿದ್ದಾರೆ. 2024-25ನೇ ಸಾಲಿನ ಸಾಧನೆಗೆ ನಮ್ಮ ಶಾಖೆ ಕೈಗನ್ನಡಾಗಿದೆ. ಹಾಗೆ ಪ್ರಸ್ತುತ ವರ್ಷ ಮತ್ತೊಂದು ಗುರಿ ಮುಟ್ಟಲು ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ವಿಮಾ ಪ್ರತಿನಿಧಿಗಳಿಗೆ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು. ಎಲ್ಲ ಜೀವ ವಿಮಾ ಪ್ರತಿನಿಧಿಗಳು, ಶಾಖಾ ಸಿಬ್ಬಂದಿ ಹಾಜರಿದ್ದರು.