ಆಂಧ್ರಪ್ರದೇಶ: ಠಾಣೆಯಲ್ಲೇ ಸರ್ವಿಸ್ ರಿವಲ್ವರ್ನಿಂದ( Revolver) ಸಬ್ಇನ್ಸ್ಪೆಕ್ಟರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಪಶ್ಚಿಮ ಗೋದಾವರಿ ಜಿಲ್ಲೆಯ ತನಕು ಗ್ರಾಮಾಂತರ ಠಾಣೆಯಲ್ಲಿ ಶುಕ್ರವಾರ ನಡೆದಿದೆ.
ಸಬ್ಇನ್ಸ್ಪೆಕ್ಟರ್ ಎ.ಜಿ.ಎಸ್. ಮೂರ್ತಿ ಮೃತ. ಇತ್ತೀಚಿಗೆ ಭ್ರಷ್ಟಚಾರದ ಆರೋಪ ಇತನ ಮೇಲೆ ಹೊರಿಸಲಾಗಿತ್ತು. ವಿರುದ್ಧ ವಿಚಾರಣೆ ಬಾಕಿ ಇತ್ತು. ಇದೇ ವಿಚಾರವಾಗಿ ಇಂದು ಮುಂಜಾನೆ ಠಾಣೆಗೆ ಬಂದಿದ್ದ ಠಾಣೆಯಲ್ಲಿಯೇ ಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.
ಈ ಕುರಿತು ಮಾತನಾಡಿರುವ ಜಿಲ್ಲಾ ವರಿಷ್ಠಾಧಿಕಾರಿ(ಎಸ್ಪಿ) ಅದ್ನಾನ್ ಆಸ್ಮಿ, '' ಮುಂಜಾನೆ 7.45 ಸುಮಾರಿಗೆ ಘಟನೆ ನಡೆಸಿದೆ. ತನಿಖೆ ಬಳಿಕ ಆತ್ಮಹತ್ಯೆಯ ಕಾರಣ ತಿಳಿಯಲಿದೆ. ಪ್ರಾಥಮಿಕ ವರದಿ ಪ್ರಕಾರ ತನಿಖೆಗೆ ಬೇಸತ್ತು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ'' ಎಂದು ಹೇಳಿದ್ದಾರೆ.(ಎಜೆನ್ಸೀಸ್)