ನ್ಯೂಸ್

ನಟ ಕಾರ್ತಿ ಹೊಸ ಚಿತ್ರ 'ಸರ್ದಾರ್ 2' ಸೆಟ್‌ನಲ್ಲಿ 20 ಅಡಿಯಿಂದ ಬಿದ್ದು ಸ್ಟಂಟ್‌ಮ್ಯಾನ್ ಎಜುಮಲೈ ದುರಂತ ಸಾವು

ಚೆನ್ನೈ: ತಮಿಳು ನಟ ಕಾರ್ತಿ ಹೊಸ ಸಿನಿಮಾ 'ಸರ್ದಾರ್​ 2' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಇಂದು ಸಾಹಸದೃಶ್ಯವೊಂದರ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಹಾಕಲಾಗಿದ್ದ ಬೃಹತ್​ ಸೆಟ್‌ನಲ್ಲಿ ಸ್ಟಂಟ್‌ಮ್ಯಾನ್ ಎಜುಮಲೈ 20 ಅಡಿ ಎತ್ತರದಿಂದ ಕುಸಿದುಬಿದ್ದು, ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ.

ವರದಿಗಳ ಪ್ರಕಾರ, ಎಜುಮಲೈ ಆ್ಯಕ್ಷನ್ ಸೀಕ್ವೆನ್ಸ್‌ನ ಚಿತ್ರೀಕರಣದ ವೇಳೆ ದಿಢೀರ್​ 20 ಅಡಿ ಎತ್ತರದಿಂದ ಕುಸಿದು ಬಿದ್ದು, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇತ್ತೀಚೆಗಷ್ಟೇ ಮಹೂರ್ತ ಈಡೇರಿಸಿ, ಶುಭಾರಂಭ ಮಾಡಿದ್ದ ಸಿನಿಮಾ ತಂಡಕ್ಕೆ ಇದೀಗ ಎಜುಮಲೈ ಅವರ ಅಕಾಲಿಕ ಸಾವಿನಿಂದ ಅತೀವ ದುಃಖ ಉಂಟಾಗಿದೆ. ಪಿ.ಎಸ್. ಮಿತ್ರನ್ ನಿರ್ದೇಶನದ ಚಿತ್ರ ಇದಾಗಿದೆ.

ಇದೇ ಜುಲೈ 15ರಂದು 'ಸರ್ದಾರ್ 2' ಚಿತ್ರೀಕರಣ ಪ್ರಾರಂಭವಾಗಿತ್ತು. ಸದ್ಯ ಈ ಘಟನೆಯಿಂದ ಇಡೀ ತಂಡವೇ ಅಘಾತಕ್ಕೊಳಗಾಗಿದ್ದು, ಎಜುಮಲೈ ಅವರ ಸಾವಿನ ಸುದ್ದಿ ಕುರಿತು ನಿರ್ಮಾಪಕರು ಅಥವಾ ನಾಯಕ ನಟ ಕಾರ್ತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.