ಸಾಂದರ್ಭಿಕ ಚಿತ್ರ 
ನ್ಯೂಸ್

ಶಕ್ತಿ ಯೋಜನೆ ಎಫೆಕ್ಟ್ | ವಿದ್ಯಾರ್ಥಿಗಳಿಗೆ ಬಸ್ಸಿಲ್ಲದೇ ಸಂಕಷ್ಟ; ಮುಗಿಲು ಮುಟ್ಟಿದ ಪರದಾಟ…

Webdesk - Athul Damale

ಬಾಗಲಕೋಟೆ: ಶಕ್ತಿ ಯೋಜನೆಯ ಪರಿಣಾಮ ಜನರಿಗೆ ನಾನಾ ರೀತಿಯಲ್ಲಿ ಆಗುತ್ತಿದೆ. ಶಕ್ತಿ ಯೋಜನೆ ಪ್ರಾರಂಭವಾದ ಮೊದಮೊದಲಿಗೆ ಸಾರಿಗೆ ಬಸ್‍ಗಳಲ್ಲಿ ನಾನಾ ರೀತಿಯ ಗೊಂದಲಗಳು ಉಂಟಾಗಿದ್ದವು. ವಿಚಿತ್ರ ರೀತಿಗಳಲ್ಲಿ ತಮ್ಮ ಸೀಟುಗಳಿಗಾಗಿ ಜನರು ಪರದಾಡುವ ವಿಡಿಯೋಗಳು ವೈರಲ್ ಆಗಿದ್ದವು. ಇನ್ನೂ ಕೆಲವರು ಗಂಡಸರಿಗೆ ಮಾತ್ರ ಎನ್ನುವಂತಹ ನಕಲಿ ಫೋಟೊಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‍ ಮಾಡಿದ್ದರು. ಆದರೆ ಇದೀಗ ವಿದ್ಯಾರ್ಥಿಗಳಿಗೂ ಸಂಕಷ್ಟ ಎದುರಾಗಿದೆ.

ಬಾಗಲಕೋಟೆಯ ವಿದ್ಯಾಗಿರಿಯ ಇಂಜನಿಯರಿಂಗ್ ಕಾಲೇಜ್ ವೃತ್ತದಲ್ಲಿ ನೂರಾರು ವಿದ್ಯಾರ್ಥಿಗಳು ಬಸ್‍ ಸಮಸ್ಯೆಯಿಂದ ಪರದಾಡುತ್ತಿರುವುದು ಕಂಡುಬಂದಿದೆ. ಕೆಲವೆಡೆಗಳಲ್ಲಿ ವಿದ್ಯಾರ್ಥಿಗಳನ್ನು ಬಸ್‍ಗಳು ಹತ್ತಿಕೊಳ್ಳದೇ ಸಂಚರಿಸುತ್ತಿರುವುದು. ವಿದ್ಯಾರ್ಥಿಗಳು ನಿಲ್ದಾಣ ಹಾಗೂ ವಿವಿಧ ವೃತ್ತಗಳಲ್ಲಿ ಬಸ್‍ಗಾಗಿ ಗಂಟೆಗಟ್ಟಲೇ ಕಾಯುತ್ರ ನಿಲ್ಲುವ ಸ್ಥಿತಿ ಎದುರಾಗಿದೆ.

“ಶಕ್ತಿ ಯೋಜನೆ ಬಳಿಕ ನಮ್ಮ ಪಾಡು ಕೇಳೋರೆ ಇಲ್ಲ. ಇಂದು ಒಂದು ದಿನದ ಸಮಸ್ಯೆ ಅಲ್ಲ. ಪ್ರತಿನಿತ್ಯದ ಗೋಳು. ಬರುವ ಪ್ರತಿ ಬಸ್ ಫುಲ್ ಆಗಿರುತ್ತವೆ. ಚಾಲಕ, ನಿರ್ವಾಹಕರು ವಿದ್ಯಾರ್ಥಿಗಳನ್ನು ನೋಡ್ತಲೇ ಬಸ್ ನಿಲ್ಲಿಸದೇ ಹೋಗುತ್ತಾರೆ. ಬಸ್ ಕಿರಿಕಿರಿಯಿಂದ ಪ್ರತಿ ದಿನವೂ ತರಗತಿಗಳು ತಪ್ಪುತ್ತಿವೆ. ಸಮಯಕ್ಕೆ ಸರಿಯಾಗಿ ಶಾಲೆ, ಕಾಲೇಜ್‍ಗೆ ಬರಲು ಆಗುತ್ತಿಲ್ಲ. ವಾಪಸ್ಸು ಮನೆಗೆ ಹೋಗಲು ಆಗುತ್ತಿಲ್ಲ. ಶಕ್ತಿ ಯೋಜನೆ ಬಂದ್ ಮಾಡಿ, ಇಲ್ಲವೆ ಬಸ್ ಸಂಖ್ಯೆ ಹೆಚ್ಚಿಸಿ. ಬಸ್‍ ಸಮಸ್ಯೆಯಿಂದಾಗಿ ಓದಿಗೆ ತೊಂದರೆ ಆಗುತ್ತಿದೆ” ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.