ನ್ಯೂಸ್

ಸಾವಿಗೂ ಮುನ್ನ 'ಸಾರಿ ಪಾಪಾ, ಹ್ಯಾಪಿ ಬರ್ತಡೆ' ಎಂದೇ ಡೆತ್​ನೋಟ್ ಬರೆದ ವಿದ್ಯಾರ್ಥಿ…

ರಾಜಸ್ಥಾನದ: ರಾಜಸ್ಥಾನದ ಕೋಟಾದಲ್ಲಿ, ವಿದ್ಯಾರ್ಥಿಗಳ ಆತ್ಮಹತ್ಯೆಗಳ ಬಗ್ಗೆ ಈ ಮಕ್ಕಳ ಗುಂಪು ಚರ್ಚಿಸಿದಾಗಲೆಲ್ಲಾ ಹದಿನೆಂಟು ವರ್ಷದ ಮಂಜೋತ್ ಸಿಂಗ್ "ನಾನೇ ಸಾಲಿನಲ್ಲಿ ಮುಂದೆ" ಎಂದು ಸ್ನೇಹಿತರಿಗೆ ತಿಳಿಸಿದ್ದ. ಈಗ ಆ ಮಂಜೋತ್ ಸಿಂಗ್ ಗುರುವಾರ, ವೈದ್ಯಕೀಯ ಕಾಲೇಜು ಆಕಾಂಕ್ಷಿ ಆತ್ಮಹತ್ಯೆಯಿಂದ ನಿಧನರಾದರು.

ಮಂಜೋತ್ ತನ್ನ ತಂದೆಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದು, ಅದೇ ಡೆತ್​ನೋಟ್​ ಆಗಿಬಿಟ್ಟಿದೆ. ಪ್ರತ್ಯೇಕ ಟಿಪ್ಪಣಿಯಲ್ಲಿ, ಮಂಜೋತ್ ಸಿಂಗ್ "ಕ್ಷಮಿಸಿ" ಎಂದು ಬರೆದಿದ್ದಾರೆ. ಮತ್ತೊಂದು ಸ್ಟಿಕಿ ನೋಟ್​ನಲ್ಲಿ ಆತ ತನ್ನ ನಿರ್ಧಾರಕ್ಕೆ ಯಾರೂ ಜವಾಬ್ದಾರರಾಗಿರಬಾರದು ಎಂದು ಹೇಳಿದ್ದಾನೆ.

"ನಾನು ನನ್ನ ಸ್ವಂತ ಇಚ್ಛೆಯಿಂದ ಆತ್ಮಹತ್ಯೆ ಮಾಡಿದ್ದೇನೆ. ಆದ್ದರಿಂದ, ದಯವಿಟ್ಟು ನನ್ನ ಸ್ನೇಹಿತರು ಮತ್ತು ಅವರ ಪೋಷಕರಿಗೆ ತೊಂದರೆ ನೀಡಬೇಡಿ "ಎಂದು ಮತ್ತೊಂದು ಸ್ಟಿಕಿ ನೋಟ್​ನಲ್ಲಿ ಬರೆಯಲಾಗಿದೆ.

ಮಂಜೋತ್ ಉತ್ತಮ ವಿದ್ಯಾರ್ಥಿಯಾಗಿದ್ದು ಮೋಜಿನ ಪ್ರೀತಿಯ ಸ್ವಭಾವವನ್ನು ಹೊಂದಿದ್ದ ಎಂದು ಆತನ ಸ್ನೇಹಿತರು ಪೊಲೀಸರಿಗೆ ತಿಳಿಸಿದರು. ಆತ 12ನೇ ತರಗತಿಯ ಪರೀಕ್ಷೆಗಳಲ್ಲಿ ಶೇಕಡಾ 93 ಅಂಕಗಳನ್ನು ಗಳಿಸಿದ್ದು ಕೋಚಿಂಗ್ ಸಂಸ್ಥೆಯಲ್ಲಿ ಪರೀಕ್ಷೆಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಎಂದು ಪೊಲೀಸ್ ಅಧಿಕಾರಿ ಧರ್ಮ್​ವೀರ್ ಸಿಂಗ್ ಸುದ್ದಿ ಸಂಸ್ಥೆಗೆ ತಿಳಿಸಿದರು.

ಉತ್ತರ ಪ್ರದೇಶದ ರಾಂಪೂರ್​ಗೆ ಸೇರಿದ ಮಂಜೋತ್ ಸಿಂಗ್ ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ. ಆತ ಏಪ್ರಿಲ್​ನಲ್ಲಿ ಕೋಟಾಗೆ ಬಂದು ನೀಟ್​ ಪರೀಕ್ಷೆಗೆ ತಯಾರಿ ನಡೆಸಲು ಕೋಚಿಂಗ್ ಸೆಂಟರ್​ಗೆ ಸೇರಿಕೊಂಡರು.

ಸುದ್ದಿ ಸಂಸ್ಥೆ ಪಿಟಿಐನಲ್ಲಿನ ವರದಿಯ ಪ್ರಕಾರ, ವಿದ್ಯಾರ್ಥಿಯು ತನ್ನ ಮೂವರು ಶಾಲಾ ಸಹಪಾಠಿಗಳೊಂದಿಗೆ ಕೋಟಾಕ್ಕೆ ಬಂದಿದ್ದ. ಅವರು ಒಂದೇ ಹಾಸ್ಟೆಲ್​ನಲ್ಲಿ ಪ್ರತ್ಯೇಕ ಕೋಣೆಗಳಲ್ಲಿ ವಾಸಿಸುತ್ತಿದ್ದರು.

ಗುರುವಾರ ಬೆಳಿಗ್ಗೆ ಮಂಜೋತ್​ನ ದೇಹ ಹಾಸ್ಟೆಲ್ ಕೋಣೆಯಲ್ಲಿ ನೇತಾಡುತ್ತಿರುವುದು ಕಂಡುಬಂದಿದೆ. ಅವನ ಕೈಗಳನ್ನು ಹಿಂಭಾಗದಲ್ಲಿ ಕಟ್ಟಲಾಗಿತ್ತು. ಶೀಘ್ರದಲ್ಲೇ, ಹಾಸ್ಟೆಲ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು ಪೊಲೀಸರನ್ನು ಕರೆಸಲಾಯಿತು. ಅಧಿಕಾರಿಯು ವಿದ್ಯಾರ್ಥಿಯ ದೇಹವನ್ನು ಶವಾಗಾರಕ್ಕೆ ಕರೆದೊಯ್ಯದೇ ಅವರ ಕುಟುಂಬ ಸದಸ್ಯರು ಬರುವವರೆಗೆ ಕಾಯುತ್ತಿದ್ದಾರೆ ಎಂದು ಹೇಳಿದರು. ಆತ್ಮಹತ್ಯೆಗೆ ನಿಖರವಾದ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದರು. (ಏಜೆನ್ಸೀಸ್)