ಕೊಲಂಬಸ್: ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಯುನೈಟೆಡ್ ಸ್ಟೇಟ್ಸ್ನ ಒಹಿಒನಲ್ಲಿ ನಡೆದಿದೆ.
ಸಾಯೇಶ್ ವೀರ(24) ಮೃತ ದುರ್ದೈವಿ ಎಂದು ತಿಳಿದು ಬಂದಿದ್ದು ಯುವಕ ಕೆಲಸ ಮಾಡುತ್ತಿದ್ದ ಗ್ಯಾಸ್ ಬಂಕನಲ್ಲಿ ಈ ಘಟನೆ ನಡೆದಿದೆ.
ಯುವಕ ಸಾಯೇಶ್ ಉನ್ನತ ವ್ಯಾಸಂಗದ ಜೊತೆಗೆ ಗ್ಯಾಸ್ ಸ್ಟೇಷನ್ನಲ್ಲಿ ಒಂದರಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದರು. ಈ ವೇಳೆ ಬಂಕ್ಗೆ ಬಂದ ಆರೋಪಿಯೂ ಏಕಾಏಕಿ ಯುವಕನ ಮೇಲೆ ಗುಂಡಿನ ದಾಳಿ ಮಾಡಿದ್ಧಾನೆ.
ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಸಿಬ್ಬಂದಿ ಹಾಗೂ ವೈದ್ಯರು ಸಾಯೇಶ್ನನ್ನು ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದ ಕಾರಣ ಯುವಕ ಮೃತಪಟ್ಟಿದಾನೆಂದು ವೈದ್ಯರು ಗೋಷಿಸಿದ್ದಾರೆ.
ಯುವಕ ಸ್ನಾತಕೋತರ ಪದವಿ ವ್ಯಾಸಂಗ ಮಾಡಲು ಎಚ್ 1ಬಿ ವೀಸಾ ಅಡಿಯಲ್ಲಿ ಆಯ್ಕೆಯಾಗಿದ್ದನ್ನು. ತುಂಬಾ ಕನಸುಗಳೊಂದಿಗೆ ಇಲ್ಲಿಗೆ ಬಂದಿದ್ದನ್ನು ಮತ್ತು ಈತ ಉತ್ತಮ ಕ್ರಿಕೆಟ್ ಆಟಗಾರ.
ಎರಡು ವರ್ಷಗಳ ಹಿಂದೆ ಅವರ ತಂದೆ ಮೃತಪಟ್ಟ ನಂತರ ಕುಟುಂಬವನ್ನು ಪೋಷಿಸುವ ಸಲುವಾಗಿ ಆತ ಅಮೆರಿಕಾಗೆ ಬಂದಿದ್ದ. ಆದರೆ, ವಿಧಿ ಆಟವೇ ಬೇರೆಯೇ ಇತ್ತು ಎಂದು ರೋಹಿತ್ ಯಲಮಂಚಿಲಿ ಎಂಬವವರು ಪ್ರತಿಕ್ರಿಯಿಸಿದ್ದಾರೆ.
ಇನ್ನು ಸಾಯೇಶ್ನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪಿ ಫೋಟೋವಮನ್ನು ಪೊಲೀಸರು ಬಿಡಗಡೆ ಮಾಡಿದ್ಧಾರೆ. ಸದ್ಯ ತನಿಖೆ ಕೈಗೊಂಡಿರುವ ಪೊಲೀಸರು ಶೀಘ್ರದಲ್ಲೇ ಆರೋಫಿಯನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.