ತರೀಕೆರೆ ತಾಲೂಕಿನ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಮಿತ್ರ ಪತ್ರಿಕೆ ವಿತರಿಸಲಾಯಿತು. ಟಿ.ಪುಟ್ಟಪ್ಪ, ಷಡಕ್ಷರಿ, ಕೆ.ಟಿ.ಹಾಲೇಶ್, ಎಂ.ಕಿಸರ್ ಖಾನ್ ಇತರರಿದ್ದರು.  
ನ್ಯೂಸ್

ನೇರಲಕೆರೆ ಶಾಲೆಯಲ್ಲಿ ವಿದ್ಯಾರ್ಥಿ ಮಿತ್ರ ವಿತರಣೆ

ತರೀಕೆರೆ: ಸಮಾಜದಲ್ಲಿ ಉತ್ತಮ ನಾಗರಿಕತೆ, ಜ್ಞಾನ, ಸಂಸ್ಕಾರ ವೃದ್ಧಿಸುವಲ್ಲಿ ಪತ್ರಿಕೆಯ ಪಾತ್ರ ಪ್ರಮುಖವಾದುದು ಎಂದು ನಿವೃತ್ತ ಶಿಕ್ಷಕ ಟಿ.ಪುಟ್ಟಪ್ಪ ತಿಳಿಸಿದರು.

ತಾಲೂಕಿನ ನೇರಲಕೆರೆ ಗ್ರಾಮದ ಶ್ರೀ ಅಮೃತೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಮಿತ್ರ ಪತ್ರಿಕೆ ವಿತರಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ವಿದ್ಯಾರ್ಥಿ ಮಿತ್ರ ಪತ್ರಿಕೆ ಪಾತ್ರ ದೊಡ್ಡದು. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ವಿಷಯಗಳನ್ನು ಎಲ್ಲರಿಗೂ ತಲುಪಿಸುವಲ್ಲಿ ಪತ್ರಿಕೆ ಪಾತ್ರ ಪ್ರಮುಖವಾದುದು ಎಂದು ತಿಳಿಸಿದರು.
ಸ್ಥಳೀಯ ಸಲಹಾ ಸಮಿತಿ ಉಪಾಧ್ಯಕ್ಷ ಷಡಕ್ಷರಿ ಮಾತನಾಡಿ, ಪತ್ರಿಕೆಗಳನ್ನು ಪ್ರತಿದಿನ ಓದುವುದರಿಂದ ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ ಎಂದರು.
ಮುಖ್ಯ ಶಿಕ್ಷಕ ಕೆ.ಟಿ.ಹಾಲೇಶ್, ಎಂ.ಕಿಸರ್ ಖಾನ್, ಜೆ.ರಮಾಕಾಂತ್, ಸತೀಶ್, ಸವಿತಮ್ಮ, ಪಂಚಾಕ್ಷರಪ್ಪ, ವೀಣಾ, ಎಂ.ಎಂ.ಬಸವರಾಜಪ್ಪ, ಪತ್ರಿಕಾ ವಿತರಕ ರೇವಣಸಿದ್ದಪ್ಪ ಇದ್ದರು.