ನ್ಯೂಸ್

ಡಿಸ್ಟಿಂಕ್ಷನ್ ಬಂದ್ರು ನೇಣಿಗೆ ಕೊರಳು !

lakshmihegde

ತುಮಕೂರು: ದ್ವಿತೀಯ ಪಿಯುಸಿಯಲ್ಲಿ ಶೇ 89 ಅಂಕ ಪಡೆದರೂ ಕಡಿಮೆ ಆಯಿತು ಅಂತ ನೊಂದುಕೊಂಡು ವಿದ್ಯಾರ್ಥಿಯೊಬ್ಬ ನೇಣಿಗೆ ಕೊರಳೊಡ್ಡಿದ್ದಾನೆ.

ಕ್ಯಾತಸಂದ್ರ ಬಳಿಯ ಬಸವಾಪಟ್ಟದ ಚೇತನ್ ( 18) ಮನೆಯಲ್ಲೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ನಗರದ ವಿದ್ಯಾ ಕಾಲೇಜಿನಲ್ಲಿ ಓದುತಿದ್ದ ಚೇತನ್ ಶೇ 89 ಅಂಕಗಳಿಸಿದ್ದು ಫಲಿತಾಂಶ ಬಂದಾಗಿನಿಂದ ಇನ್ನೂ ಹೆಚ್ಚು ಅಂಕ ಬರುವ ನಿರೀಕ್ಷೆಯಿತ್ತು ಎಂದು ಬೇಸರಿಸಿಕೊಂಡಿದ್ದು ಸಂಜೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನೇಣುಹಾಕಿಕೊಂಡಿದ್ದಾನೆ ಎನ್ನಲಾಗಿದೆ. ಕ್ಯಾತಸಂದ್ರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.