ನ್ಯೂಸ್

ನೀತಿ ಸಂಹಿತೆ ಕಟ್ಟುನಿಟ್ಟಿನ ಜಾರಿ. ಗೋಡೆ ಬರಹ, ಬ್ಯಾನರ್ಸ್‌ ತೆರವು

Bengaluru - Political - Vilas Melagiri

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದ್ದು, ಬ್ಯಾನರ್, ಕಟೌಟ್ ತೆರವು ಕಾರ್ಯಾಚರಣೆ ಚುರುಕುಗೊಂಡಿದೆ.

ನೀತಿ ಸಂಹಿತೆ ಜಾರಿಯಾದ 24 ಗಂಟೆಗಳಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಗೋಡೆ ಬರಹ, ಪೋಸ್ಟರ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿದೆ.

ತೆರವು ಕಾರ್ಯಾಚರಣೆಗೆ 5130 ತಂಡ ರಚನೆ ಮಾಡಿದ್ದು, 24177 ವಾಲ್ ಪೇಂಟಿಗ್, 35740 ಪೋಸ್ಟರ್ಸ್‌, 33,683 ಬ್ಯಾನರ್ ಹಾಗೂ ಇತರೆ 24,899 ಸೇರಿದಂತೆ ಒಟ್ಟು 1,16,287 ಗೋಡೆ, ಬರಹ, ಬ್ಯಾನರ್, ಪೋಸ್ಟರ್‌ಗಳನ್ನು ಗುರುತಿಸಲಾಗಿದ್ದು, ಈ ಪೈಕಿ 87212 ನ್ನು ತೆರವುಗೊಳಿಸಲಾಗಿದೆ.