ಜಂಟಿ ಕÊಷಿ ನಿರ್ದೇಶಕ ಬಿ.ಮಂಜುನಾಥ್
- ವರ್ತಕರಿಗೆ ಕೃಷಿ ಇಲಾಖೆ ಎಚ್ಚರಿಕೆ
- ಸಂಯುಕ್ತ ರಸಗೊಬ್ಬರ ಬಳಸಲು ಸಲಹೆ
- ರಂಜಕ
ಚಿತ್ರದುರ್ಗ: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು,ಬಿತ್ತನೆಗೆ ಪೂರಕವಾಗಿ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಖರೀದಿ ಪ್ರಕ್ರಿಯೆ ಚುರುಕಾಗಿದೆ.
ಈ ಸಂದರ್ಭ ದುರುಪಯೋಗಪಡಿಸಿಕೊಂಡು ಕೆಲವು ಮಾರಾಟಗಾರರು ರಸಗೊಬ್ಬರವನ್ನು ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ.
ಜಿಲ್ಲೆಯ ಯಾವುದೇ ಅಽಕÊತ ರಸಗೊಬ್ಬರ ಮಾರಾಟಗಾರರು ರಸಗೊಬ್ಬರದ ಚೀಲದ ಮೇಲೆ ಮುದ್ರಿತÀ ಗರಿಷ್ಠ ಮಾರಾಟ ಬೆ ಲೆಗಿಂತ ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡಬಾರದು.
ಪ್ರತಿ ಮಳಿಗೆ ಮುಂದೆ ರಸಗೊಬ್ಬರದ ದರ ಪಟ್ಟಿ ಮತ್ತು ದೈನಂದಿ ನ ದಾಸ್ತಾನು ವಿವರವನ್ನು ಜನರಿಗೆ ಕಾಣುವಂತೆ ಕಡ್ಡಾಯ ವಾಗಿ ಪ್ರದರ್ಶಿಸಬೇಕು.
ಈ ಸೂಚನೆಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಕÊತಕ ಅಭಾವ ಸÊಷ್ಟಿಸುವುದು ಅಥವಾ ಹೆಚ್ಚಿ ನ ಬೆಲೆಗೆ ಮಾರಾಟ ಮಾಡಿದರೆ ಅಂಥ ಮಾರಾಟಗಾರರ ಪರವಾನಗಿ ತಕ್ಷಣ ಅಮಾನತು ಅಥವಾ ರದ್ದು ಪಡಿಸಲಾಗುವುದು ಎಂದು ಜಂಟಿ ಕÊಷಿ ನಿರ್ದೇಶಕ ಬಿ.ಮಂಜುನಾಥ್ ಎಚ್ಚರಿಸಿದ್ದಾರೆ.
ಡಿಎಪಿ ರಸಗೊಬ್ಬರವೊಂದನ್ನೇ ಬಳಸದೆ,ಮಣ್ಣಿನ -Àಲವತ್ತತೆ ಹಾಗೂ ಉತ್ತಮ ಇಳುವರಿಗಾಗಿ ರೈತರು ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರಗಳನ್ನು ಬಳಸುವಂತೆ ಮಂಜುನಾಥ್ ಸಲಹೆ ನೀಡಿದ್ದಾರೆ. ಬೆಳೆಗೆ ಅಗತ್ಯವಿರುವ ೧೭ ಪೋಷಕಾಂಶಗಳಲ್ಲಿ ಸಾರಜನಕ, ರಂಜಕ ಮತ್ತು ಪೊಟ್ಯಾಶ್ ಪ್ರಮುಖವಾಗಿವೆ.
ಪ್ರಸ್ತುತ ರೈತರು ಡಿಎಪಿ ಮತ್ತು ಯೂರಿಯಾವನ್ನು ಅತಿಯಾಗಿ ಬಳಸುತ್ತಿದ್ದು, ಇದರಿಂದ ಪೊಟ್ಯಾ ಶ್ ಕೊರತೆಯುಂಟಾಗಿ ಬೆಳೆ ಗಳ ರೋಗನಿರೋಧಕ ಶಕ್ತಿ ಕುಂದುತ್ತಿದೆ.
ಶಿ-Áರಸ್ಸಿನಂತೆ ಪೋಷಕಾಂಶಗಳ ಅನುಪಾತವಿರ ಬೇಕು. ಆದರೆ ಪ್ರಸ್ತುತ ಬಳಕೆ ಸಮತೋಲನ ತಪ್ಪುತ್ತಿದೆ. ಆದ್ದರಿಂದ ಡಿಎಪಿ ಪರ್ಯಾಯವಾಗಿ ಗಂಧಕದ ಅಂಶವಿರುವ ವಿವಿಧ ಗ್ರೇಡ್‌ಗಳ ಸಂಯುಕ್ತ ಗೊಬ್ಬರಗಳನ್ನು ಬಳಸಬಹುದು. ನ್ಯಾನೊ ಡಿಎಪಿ ಬಳ ಸಲೂ ಅವಕಾಶವಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಕಪ್ಪು ಮ ತ್ತು ಬಿಳಿ ಬಣ್ಣದ ಅರಳು ರೂಪದ ಡಿಎಪಿ ಲಭ್ಯವಿದ್ದು, ಬಣ್ಣ ಬೇರೆಯಾಗಿದ್ದರೂ ಇವುಗಳ ಗು ಣಮಟ್ಟ ಹಾಗೂ ಪೋಷಕಾಂಶಗಳಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಆದ್ದರಿಂದ ರೈತರು ಯಾವುದೇ ಗೊಂದಲವಿಲ್ಲದೆ ಲಭ್ಯ ವಿರುವ ಗೊಬ್ಬರ ಬಳಸಬಹುದೆಂದು ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಅಗ್ರಿ ಜೆಡಿ ಮಂಜುನಾಥ್ ಮಗ್ ಶಾಟ್ ಬಳಸಿ)