ನ್ಯೂಸ್

ಮಿತಿಮೀರಿದ ಬೀದಿ ನಾಯಿಗಳ ಉಪಟಳ; ಇಂದು ನಾಲ್ಕು ಮಕ್ಕಳ ಮೇಲೆ ದಾಳಿ, ಒಂದು ಮಗುವಿಗೆ ಗಂಭೀರ ಗಾಯ

ಬೆಳಗಾವಿ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು ಇಂದು ಏಕಕಾಲಕ್ಕೆ ನಾಲ್ಕು ಮಕ್ಕಳ ಮೇಲೆ ದಾಳಿ ಮಾಡಿವೆ.

ಗಾಂಧಿನಗರ ಮತ್ತು ಮನ್ನತ ಕಾಲನಿಯಲ್ಲಿ ಬೀದಿ ನಾಯಿಗಳು ದಾಳಿ ನಡೆಸಿದ ಪರಿಣಾಮ ಶಾನವಾಜ್ (3), ಫೈಜಾನ್ (5), ಹಾಗೂ ಆದೀಬಾ ಸೈಯದ್ (11) ಗಾಯಗೊಂಡಿದ್ದಾರೆ. ಅದರಲ್ಲಿ ಒಂದು ಮಗು ತೀವ್ರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.