ನವದೆಹಲಿ: ಇಂದಿನ ಯುವಪೀಳಿಗೆಗೆ ಸೋಶಿಯಲ್ ಮೀಡಿಯಾ ಹುಚ್ಚು, ಕ್ರೇಜ್ ಎಷ್ಟರ ಮಟ್ಟಿಗೆ ಇದೆ ಎಂದರೆ ಪ್ರಾಣದ ಹಂಗನ್ನು ತೊರೆಯುತ್ತಾರೆ. ಇದಕ್ಕೆ ಉದಾಹರಣೆ ಎನ್ನುವಂತೆ ಕೆಲವು ಸುದ್ದಿಗಳು ನಮ್ಮ ಕಣ್ಣ ಮುಂದೆ ಬರುತ್ತವೆ. ಇದೀಗ ಇಂತಹದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇಂದಿನ ದಿನಗಳಲ್ಲಿ ಫ್ಯಾಶನ್ ಹೆಸರಿನಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದು ನಮಗೆಲ್ಲಾ ತಿಳಿದೆ ಇದೆ. ರೂಪದರ್ಶಿಗಳನ್ನು ವಿಚಿತ್ರ ಉಡುಗೆಗಳಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ. ಟ್ರೆಂಡ್ ಹೆಸರಿನಲ್ಲಿ ನಟ, ನಟಿಯರು ಕೂಡಾ ಚಿತ್ರವಿಚಿತ್ರವಾದ ಉಡುಗೆಯನ್ನು ತೊಟ್ಟು ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಅನೇಕ ಉದಾಹರಣೆಗಳಿವೆ. ಆದರೆ ಸೆಲೆಬ್ರೆಟಿಗಳು ಮಾತ್ರನಾ? ಇಂತಹ ವಿತ್ರ ಬಟ್ಟೆ ತೊಡುವುದು... ಜನಸಾಮಾನ್ಯರು ತೊಡುತ್ತೇವೆ ಎಂದು ಕೆಲವು ಯುವಕರು ಹುಚ್ಚು ಸಾಹಸಕ್ಕೆ ಕೈ ಹಾಕಿದ್ದಾರೆ.
ಕೆಲವು ಯುವಕರು ಹಿರಿದ ಶರ್ಟ್, ವಿಚಿತ್ರವಾದ ಫ್ಯಾಂಟು, ಕಣ್ಣಿಗೆ ಕನ್ನಡ ಒಂದು ಕಾಲಿಗೆ ಶೂ, ಇನ್ನೊಂದು ಕಾಲಿಗೆ ಚಪ್ಪಲಿ, ಕೈಯಲ್ಲಿ ಟ್ರಾಲಿ ಬ್ಯಾಗ್ ಹಿಡಿದು ಯೂನಿಕ್ ಹೆರ್ಸ್ಟೈಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಗೋಣಿ ಚೀಲ, ಪ್ಲಾಸ್ಟಿಕ್ ಬಿಡದೆ ಬಟ್ಟೆಯನ್ನಾಗಿ ಮಾಡಿ ಧರಿಸಿದ್ದಾರೆ. ಈ ವಿತ್ರ ವೇಶವನ್ನು ತೊಟ್ಟ ಯುವಕರು ಹೆಚ್ಚಿನ ಜನರು ಸೇರಬಹುದಾದ ಬಸ್ ನಿಲ್ದಾಣ, ಕಾಲೇಜ್ ಹುಡುಗ, ಹುಡುಗಿಯರು ಇರುವ ಸ್ಥಳ, ರಸ್ತೆ, ಪಾರ್ಕ್ ಹೀಗೆ ಮುಂತಾದ ಸ್ಥಳಗಳಲ್ಲಿ ಓಡಾಡಿದ್ದಾರೆ. ಈ ವೆಳೆ ಕಲವು ಯುವಕ ಹಾಗೂ ಯುವತಿಯರಿಗೆ ಈ ವಿಚಿತ್ರ ಬಟ್ಟೆ ಮುಜುಗರವನ್ನುಂಟು ಮಾಡಿದೆ. ಕೆಲವರು ನಕ್ಕಿದ್ದಾರೆ. ಇನ್ನು ಕೆಲವರು ಮೂತಿ ತಿರುವಿದ್ದಾರೆ, ಇನ್ನು ಹಲವರು ನೋಡಿದ್ರು ನೋಡದಂತೆ ಮುಂದೆ ಸಾಗಿದ್ದಾರೆ. ಆದರೆ ಯುವಕರು ಮಾತ್ರ ಇದ್ಯಾವುದಕ್ಕೂ ಕ್ಯಾರೆ ಎನ್ನದೇ ಓಡಾಡಿದ್ದಾರೆ. ಪೊಲೀಸರು ಏನು ಹೇಳೋಕು ಆಗದೆ.. ಏನು ಮಾಡಲು ಆಗದೇ ಸುಮ್ಮನೆ ನಿಂತು ನೋಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಫ್ಯಾಶನ್ನು.........ಪಾಪ ಪೋಲಿಸ್ ನವರು ಏನೂ ಹೇಳೋ ಹಾಗಿಲ್ಲ. ಸುಮ್ನೆ ನೋಡ್ತಾ ಇದ್ದಾರೆ. ಜನರ ನೋಟ ನಾ ತಮ್ಮ ಕಡೆ ಸೆಳೆಯೋದಕ್ಕೆ . ನಾನಾತರ ಮಂಗನ ಆಟಗಳು .....ಹೀಗಂದ್ರೆ ಪಾಪ ದೇವತಾರೂಪಿ ಮಂಗಗಳಿಗೂ ಅವಮಾನಿಸಿದಂತೆ. ಅದೇನ್ ಜನನೋ ಅದೆಲಿಂದ ಬತ್ತಾರೋ ಎಂದು ಬರೆದುಕೊಂಡು ನೆಟ್ಟಿಗರೊಬ್ಬರು ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಆದರೆ ಈ ದೃಶ್ಯ ಸೆರೆಯಾಗಿದ್ದು ಎಲ್ಲಿ? ಈ ಯುವಕರು ಯಾರು ಎನ್ನುವ ಬಗ್ಗೆ ಮಾಹಿತಿ ಇಲ್ಲ.
ವಿಡಿಯೋ ನೋಡಿದ ಹಲವರು ಹುಚ್ಚುತನದ ಪರಮಾವಧಿನಾ? ಫ್ಯಾಶನ್ ಗುರು ಇದು...ಯಾಕ್ರೋ ಹೀಗೆಲ್ಲಾ ಮಾಡ್ತೀರಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.