ನ್ಯೂಸ್

ಪ್ರಚಾರ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ಸಿಎಂ ನಿತೀಶ್​ ಕುಮಾರ್​ ಮೇಲೆ ಬಿದ್ದ ಈರುಳ್ಳಿ, ಕಲ್ಲು...

lakshmihegde

ಬಿಹಾರದಲ್ಲಿ ಒಂದೆಡೆ ಎರಡನೇ ಹಂತದ ಮತದಾನ ನಡೆಯುತ್ತಿದ್ದರೆ, ಮತ್ತೊಂದೆಡೆ ಮೂರನೇ ಹಂತದ ಮತದಾನಕ್ಕೆ ರಾಜಕೀಯ ದಿಗ್ಗಜರ ಪ್ರಚಾರ ನಡೆಯುತ್ತಿದೆ.

ನವೆಂಬರ್​ 7ರಂದು ನಡೆಯಲಿರುವ ಮೂರನೇ ಹಂತದ ಮತದಾನ ನಿಮಿತ್ತ ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಅರಾರಿಯಾ ಮತ್ತು ಸಹರ್ಸಾ ಜಿಲ್ಲೆಗಳಲ್ಲಿ ಬೆಳಗ್ಗೆ ಚುನಾವಣಾ ರ್ಯಾಲಿ ನಡೆಸಿದ್ದಾರೆ. ಹಾಗೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕಠಿಹಾರ್​ ಮತ್ತು ಕಿಶನ್​ಗಂಜ್​ಗಳಲ್ಲಿ ಪ್ರಚಾರ ಮಾಡಿದ್ದಾರೆ.

ಹಾಗೇ ಬಿಹಾರ ಹಾಲಿ ಸಿಎಂ ನಿತೀಶ್​ ಕುಮಾರ್ ಅವರು ಕೂಡ ಚುನಾವಣಾ ಪ್ರಚಾರ ನಡೆಸಿದ್ದು, ಈ ವೇಳೆ ಕಲ್ಲು, ಈರುಳ್ಳಿಗಳನ್ನು ಅವರೆಡೆಗೆ ಎಸೆಯಲಾಗಿದೆ. ಮಧುಬಾನಿಯ ಹರ್ಲಾಕಿ ಎಂಬಲ್ಲಿ ನಿತೀಶ್ ಕುಮಾರ್​ ಪ್ರಚಾರಸಭೆಯಲ್ಲಿ ಭಾಷಣ ಮಾಡುತ್ತ ನಿರುದ್ಯೋಗದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ವ್ಯಕ್ತಿಯೋರ್ವ ಅವರೆಡೆಗೆ ಈರುಳ್ಳಿಯನ್ನು ಎಸೆದಿದ್ದಾನೆ..ನಂತರ..ರಾಜ್ಯದಲ್ಲಿ ಲಿಕ್ಕರ್​ ಸ್ಮಗ್ಲಿಂಗ್​ ದಂಧೆ ಬಹಿರಂಗವಾಗಿಯೇ ನಡೆಯುತ್ತಿದೆ. ಅದನ್ನು ನಿಯಂತ್ರಣ ಮಾಡುವುದರಲ್ಲಿ ನೀವು ವಿಫಲರಾಗಿದ್ದೀರಿ ಎಂದು ಕೂಗಿದ್ದಾನೆ. ಇದನ್ನೂ ಓದಿ: ಕಮಲಾ ಹ್ಯಾರಿಸ್ ಗೆಲುವಿಗಾಗಿ ತಮಿಳುನಾಡಿನಲ್ಲಿ ವಿಶೇಷ ಪೂಜೆ, ಅಭಿಷೇಕ…

ಕೂಡಲೇ ಬಾಡಿಗಾರ್ಡ್​ಗಳು ಮುಂದೆ ಬಂದು ನಿತೀಶ್​ ಕುಮಾರ್​ಗೆ ಎದುರಾಗಿ ನಿಂತಿದ್ದಾರೆ. ಆದರೆ ಅವರನ್ನು ತಡೆದ ಸಿಎಂ, ಎಸೆಯಲಿ ಬಿಡಿ..ಆತನ ಮನಸಿಗೆ ಬಂದಷ್ಟು ಎಸೆಯಲಿ ಎಂದು ಹೇಳಿದ್ದಾರೆ. (ಏಜೆನ್ಸೀಸ್​)