ಬೆಂಗಳೂರು: ಕಾಯಕ ಸಮುದಾಯಗಳಿಗೆ ಜೀವನಭದ್ರತೆ, ನೆಮ್ಮದಿಯ ನೆಲೆ ಒದಗಿಸುವ ನಿಟ್ಟಿನಲ್ಲಿ ಕಲ್ಲುಗಣಿಗಾರಿಕೆಗೆ ಸಂಬಂಧಿಸಿದ ಕಾಯ್ದೆಗೆ ತಿದ್ದುಪಡಿಯಾಗಿದೆ. ಕುಲಕಸುಬು ಅವಲಂಬಿತ ಭೋವಿ ಸಮುದಾಯಕ್ಕೆ ತೊಂದರೆ ನೀಡುವ ಕೆಲವು ಕಾನೂನುಗಳನ್ನು ಸಡಿಲಿಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರು ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನೇತೃತ್ವದ ನಿಯೋಗ ಶನಿವಾರ ಭೇಟಿ ಮಾಡಿ ಹಾಲಿ ಕಾನೂನಿನಲ್ಲಿ ಕೆಲವೊಂದನ್ನು ಬದಲಾವಣೆ ಅಗತ್ಯವಿದೆ. ಪಾರಂಪರಿಕ ಕುಲಕಸುಬು ಅವಲಂಬಿತ ಸಮುದಾಯದ ಜನರಿಗೆ ಅನುಕೂಲ ಮಾಡಿಕೊಡಲು ಕೋರಿದೆ.
ಅಧಿಸೂಚನೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಪಾರಂಪರಿಕ ಕೆಲಸಗಾರರು ಎಂದಿದೆ. ಈ ಪೈಕಿ ಪಾರಂಪರಿಕ ಕೆಲಸಗಾರರು ಅಂದರೆ ಭೋವಿ ಸಮುದಾಯದವರು ನೇರವಾಗಿ ಅರ್ಜಿ ಸಲ್ಲಿಸಿ ಕಲ್ಲು ಗಣಿಗಾರಿಕೆ ನಡೆಸಲು ಅನುಮೋದನೆ ನೀಡಬೇಕು.
ಸಮುದಾಯದವರು ಕೆಲಸ ಮಾಡುತ್ತಿರುವ ಜಾಗದಲ್ಲಿ 31-ಝಡ್‌ಸಿರಡಿಯಲ್ಲಿ ದೊಡ್ಡ ಕ್ರಷರ್‌ಗಳ ಮಾಲೀಕರು ಅರ್ಜಿ ಸಲ್ಲಿಸಿದ್ದಾರೆ. ಸಮುದಾಯದವರಿಗೆ ಜಾಗಗಳ ಕೊರತೆಯಿರುವ ಕಾರಣ ದೊಡ್ಡ ಕ್ರಷರ್‌ಗಳ ಮಾಲೀಕರು ಸಲ್ಲಿಸಿರುವ ಅರ್ಜಿಗಳಿಗೆ ಒಂದು ವರ್ಷದ ತನಕ ಅನುಮೋದನೆ ನೀಡದೇ ಸಮುದಾಯದ ಜನರಿಗೆ ಅವಕಾಶ ಕಲ್ಪಿಸಬೇಕು.
ಗೆಜೆಟ್‌ನಲ್ಲಿ ಪ್ರಕಟಿಸಿದ ಅಧಿಸೂಚನೆಯಲ್ಲಿ ಸಣ್ಣ ಪ್ರಮಾಣದಲ್ಲಿ ಪರಿಷ್ಕರಿಸಿ ಆಯಾ ತಾಲೂಕು ಮತ್ತು ಜಿಲ್ಲೆಯಲ್ಲಿಯೇ ಸಮುದಾಯದ ಅರ್ಜಿದಾರರಿಗೆ ಅನುಮೋದನೆ ನೀಡಬೇಕು.
ಸಮುದಾಯದವರ ಟ್ರ್ಯಾಕ್ಟರ್, ವಾಹನಗಳ ಮೇಲೆ ಗಣಿ ಮತ್ತು ಪೊಲೀಸ್ ಇಲಾಖೆಯವರು ದಾಖಲಿಸಿರುವ ದಾವೆಗಳನ್ನು ಸಣ್ಣ ಪ್ರಮಾಣದ ದಂಡ ವಿಧಿಸಿ ಅಥವಾ ಉಚಿತವಾಗಿ ಹಿಂಪಡೆದು ಅನುಕೂಲ ಮಾಡಿಕೊಡಬೇಕು ಎಂದು ಮುಖ್ಯಮಂತ್ರಿಗೆ ನಿಯೋಗ ಕೋರಿದೆ.
ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನೇತೃತ್ವದ ನಿಯೋಗ ಶನಿವಾರ ಭೇಟಿಯಾಗಿ ಮನವಿ ಸಲ್ಲಿಸಿತು. ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮ್, ನಿರ್ದೇಶಕ ಗೋಡೆ ಹನುಮಂತಪ್ಪ ಇನ್ನಿತರರು ಇದ್ದರು.