ನ್ಯೂಸ್

Stock Market: ಕುಸಿತ ಕಂಡ ಷೇರುಪೇಟೆ; ಸೆನ್ಸೆಕ್ಸ್ 206 ಅಂಕ ಇಳಿಕೆ: ಕಾರಣ ಏನು?

Stock Market: ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಆರಂಭಿಕ 2ನೇ ದಿನವಾದ ಮಂಗಳವಾರ(ಸೆ.2) ಕುಸಿತ ಕಂಡಿವೆ.

ನಿಫ್ಟಿ50 ಸೂಚ್ಯಂಕವು 45.45 ಪಾಯಿಂಟ್‌ಗಳೊಂದಿಗೆ 24,579 ಅಂಕಕ್ಕೆ ಮುಕ್ತಾಯಗೊಂಡರೆ, ಬಿಎಸ್‌ಇ ಸೆನ್ಸೆಕ್ಸ್ 206 ಪಾಯಿಂಟ್‌ಗಳೊಂದಿಗೆ ಶೇ.0.26% ಇಳಿಕೆಯಾಗಿ 80,157 ಅಂಕಗಳು ಕುಸಿತ ಕಂಡಿದೆ. ಸೆಪ್ಟೆಂಬರ್ 2 ರಂದು ಸೆನ್ಸೆಕ್ಸ್‌ನ ದಿನದ ಗರಿಷ್ಠ ಮಟ್ಟ 80,761 ಆಗಿದ್ದರೆ, ನಿಫ್ಟಿಯ ದಿನದ ಗರಿಷ್ಠ ಮಟ್ಟ 24,756 ಆಗಿತ್ತು.

ಕಳೆದ ವಾರ ಭಾರೀ ಕುಸಿತ ಕಂಡಿದ್ದ ಷೇರುಪೇಟೆ ಸೋಮವಾರ(ಸೆ.1) ಆರೋಗ್ಯಕರ ಲಾಭದೊಂದಿಗೆ ಕೊನೆಗೊಂಡಿದೆ. ಆದರೆ ಮತ್ತೆ ಮಂಗಳವಾರ ಕುಸಿತ ಕಂಡಿವೆ. ಮಿಡ್​ಕ್ಯಾಪ್​ ಮತ್ತು ಸ್ಮಾಲ್​ಕ್ಯಾಪ್​​ ವಿಭಾಗಳು ಕಳಪೆ ಪ್ರದರ್ಶನ ನೀಡಿದವು.

ಕುಸಿತಕ್ಕೆ ಕಾರಣ ಏನು?

ಡಾಲರ್ ಬೆಲೆ ಐದು ವಾರಗಳ ಕನಿಷ್ಠ ಮಟ್ಟಕ್ಕೆ ಇಳಿದಿದ್ದು, ಅಲ್ಲದೆ ಸೆಪ್ಟೆಂಬರ್ 2 ರಂದು ಚಿನ್ನ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರುತ್ತಿರುವುದರಿಂದ, ಹೂಡಿಕೆದಾರರು ಈ ವಾರದ ಆರ್ಥಿಕ ದತ್ತಾಂಶಕ್ಕಾಗಿ ಕಾಯುತ್ತಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.(ಏಜೆನ್ಸೀಸ್​​)