ನ್ಯೂಸ್

Stock Market: ಸೆನ್ಸೆಕ್ಸ್ 76 ಪಾಯಿಂಟ್ಸ್​​ ಏರಿಕೆ: ಲಾಭ, ನಷ್ಟ ಗಳಿಸಿದ ಸ್ಟಾಕ್​ಗಳು ಯಾವ್ಯಾವು?

Stock Market: ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಆರಂಭಿಕ ದಿನವಾದ ಸೋಮವಾರ (ಸೆ.08) ಏರಿಕೆ ಕಂಡು ಆರೋಗ್ಯಕರ ವಹಿವಾಟು ನಡೆಸಿದೆ.

ಬಿಎಸ್‌ಇ ಸೆನ್ಸೆಕ್ಸ್ 76.4 ಪಾಯಿಂಟ್‌ಗಳೊಂದಿಗೆ ಶೇ.0.09% ಏರಿಕೆಯೊಂದಿಗೆ 80,787 ಅಂಕಕ್ಕೆ ಜಿಗಿದಿದೆ. ನಿಫ್ಟಿ50 ಸೂಚ್ಯಂಕವು 32.15 ಪಾಯಿಂಟ್‌ಗಳ ಏರಿಕೆಯೊಂದಿಗೆ 24,773 ಅಂಕಕ್ಕೆ ಮುಕ್ತಾಯಗೊಂಡಿದೆ.ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ 0.5 ಪ್ರತಿಶತ ಏರಿಕೆ ಕಂಡವು.

ನಿಫ್ಟಿಯಲ್ಲಿ ಟಾಟಾ ಮೋಟಾರ್ಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ಐಷರ್ ಮೋಟಾರ್ಸ್, ಎಂ & ಎಂ, ಬಜಾಜ್ ಆಟೋ ಪ್ರಮುಖ ಲಾಭಗಳಿಸಿವೆ, ಟ್ರೆಂಟ್, ಎಸ್‌ಬಿಐ ಲೈಫ್ ಇನ್ಶುರೆನ್ಸ್, ಏಷ್ಯನ್ ಪೇಂಟ್ಸ್, ಟಿಸಿಎಸ್, ಟೆಕ್ ಮಹೀಂದ್ರಾ ನಷ್ಟ ಅನುಭವಿಸಿವೆ.(ಏಜೆನ್ಸಿಸ್​)