ನ್ಯೂಸ್

Stock Market; 410 ಅಂಕಕ್ಕೆ ಜಿಗಿದ ಸೆನ್ಸೆಕ್ಸ್: ಲಾಭ, ನಷ್ಟ ಗಳಿಸಿದ ಸ್ಟಾಕ್​ಗಳು​ ಯಾವ್ಯಾವು?

Stock Market: ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ವಾರದ 3ನೇ ದಿನವಾದ ಬುಧವಾರ(ಸೆ.3) ಏರಿಕೆ ಕಂಡು ಆರೋಗ್ಯಕರ ವಹಿವಾಟು ನಡೆಸಿದೆ.

ನಿಫ್ಟಿ50 ಸೂಚ್ಯಂಕವು 135 ಪಾಯಿಂಟ್‌ಗಳ ಏರಿಕೆಯೊಂದಿಗೆ 24,715 ಅಂಕಕ್ಕೆ ಮುಕ್ತಾಯಗೊಂಡರೆ, ಬಿಎಸ್‌ಇ ಸೆನ್ಸೆಕ್ಸ್ 410 ಪಾಯಿಂಟ್‌ಗಳೊಂದಿಗೆ ಶೇ.0.51% ಏರಿಕೆಯೊಂದಿಗೆ 80,567 ಅಂಕಕ್ಕೆ ಜಿಗಿದಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಶೇಕಡಾ 0.63 ರಷ್ಟು ಏರಿಕೆ ಕಂಡರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇಕಡಾ 0.90 ರಷ್ಟು ಏರಿಕೆ ಕಂಡಿದೆ.

ಕಳೆದ ವಾರ ಭಾರೀ ಕುಸಿತ ಕಂಡಿದ್ದ ಷೇರುಪೇಟೆ ಸೋಮವಾರ(ಸೆ.1) ಲಾಭದೊಂದಿಗೆ ಕೊನೆಗೊಂಡಿತ್ತು. ಆದರೆ, ಮತ್ತೆ ಮಂಗಳವಾರ ಕುಸಿತಗೊಂಡಿದ್ದ ಷೇರುಪೇಟೆ ಇದೀಗ, ಆರೋಗ್ಯಕರ ಲಾಭದೊಂದಿಗೆ ಮರಳಿದೆ.

ಲಾಭ, ನಷ್ಟ ಗಳಿಸಿದ ಸ್ಟಾಕ್​ಗಳು​

ನಿಫ್ಟಿ 50 ಸೂಚ್ಯಂಕದಲ್ಲಿ ಟಾಟಾ ಸ್ಟೀಲ್ (ಶೇ 5.96 ರಷ್ಟು ಏರಿಕೆ), ಹಿಂಡಾಲ್ಕೊ ಇಂಡಸ್ಟ್ರೀಸ್ (ಶೇ 3.02 ರಷ್ಟು ಏರಿಕೆ), ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ (ಶೇ 2.94 ರಷ್ಟು ಏರಿಕೆ) ಷೇರುಗಳು ಹೆಚ್ಚು ಲಾಭ ಗಳಿಸಿದವು. ನಿಫ್ಟಿ 50 ಪ್ಯಾಕ್‌ನಲ್ಲಿ 34 ಷೇರುಗಳು ಏರಿಕೆಯಾಗಿ ಕೊನೆಗೊಂಡಿವೆ. ಅಲ್ಲದೆ, ಇನ್ಫೋಸಿಸ್ (ಶೇ 1.25 ರಷ್ಟು ಕುಸಿತ), ನೆಸ್ಲೆ ಇಂಡಿಯಾ (ಶೇ 0.72 ರಷ್ಟು ಕುಸಿತ), ಮತ್ತು ಎಚ್‌ಡಿಎಫ್‌ಸಿ ಜೀವ ವಿಮಾ ಕಂಪನಿ (ಶೇ 0.70 ರಷ್ಟು ಕುಸಿತ) ಷೇರುಗಳು ಸೂಚ್ಯಂಕದಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಿದವು.(ಏಜೆನ್ಸೀಸ್​)