ನ್ಯೂಸ್

ಸುಂಕದೊತ್ತಡಕ್ಕೆ ಷೇರುಪೇಟೆ ಕುಸಿತ

ಮುಂಬೈ: ಭಾರತದ ವಸ್ತುಗಳ ಮೇಲೆ ಅಮೆರಿಕ ವಿಧಿಸಿದ ಶೇ. 50 ಸುಂಕ, ವಿದೇಶಿ ಹೂಡಿಕೆಯ ಹೊರಹರಿವು ಮುಂತಾದ ಕಾರಣಗಳಿಂದಾಗಿ ಸತತ 2ನೇ ದಿನವಾದ ಗುರುವಾರವೂ ಭಾರತೀಯ ಷೇರು ಮಾರುಕಟ್ಟೆ ಕುಸಿದಿದೆ. ದಿನದ ವಹಿವಾಟಿನ ಮಧ್ಯೆ 773.52 ಅಂಕ ಕುಸಿದು 80,013.02ಕ್ಕೆ ತಲುಪಿದ್ದ ಸೆನ್ಸೆಕ್ಸ್, ಕೊನೆಯಲ್ಲಿ 705.97 ಅಂಕ ಇಳಿಕೆ ದಾಖಲಿಸಿ 80,080.57ರಲ್ಲಿ ಸ್ಥಿರಗೊಂಡಿತು. ನಿಫ್ಟಿ 211.15 ಅಂಕ ಕುಸಿದು 24,500.90ಕ್ಕೆ ಇಳಿಯಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಂಗಳವಾರ 6,516.49 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲ ಶೇ. 0.62 ಕಡಿಮೆಯಾಗಿ ಬ್ಯಾರೆಲ್​ಗೆ 67.63ಕ್ಕೆ ಇಳಿಯಿತು. ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಬುಧವಾರ ಷೇರು ಮಾರುಕಟ್ಟೆ ತೆರೆದಿರಲಿಲ್ಲ.