ಮುಂಬೈ: ದೇಶೀಯ ಷೇರು (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ (ನ.07) ಭಾರೀ ಇಳಿಕೆ ಕಂಡಿದೆ.
ಸೆನ್ಸೆಕ್ಸ್ 148 ಅಂಕಗಳ ನಷ್ಟದೊಂದಿಗೆ ಅಥವಾ ಶೇಕಡಾ 0.18 ರಷ್ಟು ಕುಸಿತದೊಂದಿಗೆ 83,311 ಕ್ಕೆ ಕೊನೆಗೊಂಡಿದೆ. ಆದರೆ, ನಿಫ್ಟಿ50 88 ಅಂಕಗಳ ಕುಸಿತದೊಂದಿಗೆ 25,509.70ಕ್ಕೆ ಸ್ಥಿರವಾಯಿತು. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇಕಡಾ 1.19 ಮತ್ತು ಶೇಕಡಾ 1.53 ರಷ್ಟು ಕುಸಿದಿವೆ.
ನಿಫ್ಟಿ 50ಯಲ್ಲಿನ ಗ್ರಾಸಿಮ್ ಇಂಡಸ್ಟ್ರೀಸ್ (ಶೇ 6.42 ರಷ್ಟು ಕುಸಿತ), ಹಿಂಡಾಲ್ಕೊ ಇಂಡಸ್ಟ್ರೀಸ್ (ಶೇ 5.39 ರಷ್ಟು ಕುಸಿತ), ಮತ್ತು ಅದಾನಿ ಎಂಟರ್‌ಪ್ರೈಸಸ್ (ಶೇ 4.50 ರಷ್ಟು ಕುಸಿತ) ಷೇರುಗಳು ಅತಿ ಹೆಚ್ಚು ನಷ್ಟ ಅನುಭವಿಸಿವೆ. ಇನ್ನ ಸೂಚ್ಯಂಕದಲ್ಲಿ 33 ಷೇರುಗಳು ಕುಸಿತ ಕಂಡಿವೆ.
ಬಿಎಸ್‌ಇ-ಪಟ್ಟಿಮಾಡಿದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಸುಮಾರು 470 ಲಕ್ಷ ಕೋಟಿ ರೂಗಳಿಂದ 466 ಲಕ್ಷ ಕೋಟಿ ರೂ.ಗಿಂತ ಕಡಿಮೆಗೆ ಇಳಿದಿದ್ದು, ಹೂಡಿಕೆದಾರರು ಒಂದೇ ವಹಿವಾಟಿನಲ್ಲಿ ಸುಮಾರು 4 ಲಕ್ಷ ಕೋಟಿ ರೂ. ಗಳಷ್ಟು ನಷ್ಟ ಅನುಭವಿಸಿದ್ದಾರೆ.(ಏಜೆನ್ಸೀಸ್)