ನ್ಯೂಸ್

Stock Market: ಗೂಳಿ ಓಟಕ್ಕೆ ಕರಡಿ ತಡೆ: ವಾರಾಂತ್ಯದಲ್ಲಿ ಕುಸಿತ ಕಂಡ ಸೆನ್ಸೆಕ್ಸ್

ಮುಂಬೈ: ದೇಶೀಯ ಷೇರು (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶುಕ್ರವಾರ (ಅ.23) ಭಾರೀ ಇಳಿಕೆ ಕಂಡಿದೆ.

ಬಿಎಸ್‌ಇ ಸೆನ್ಸೆಕ್ಸ್ 344.52 ಪಾಯಿಂಟ್‌ಗಳೊಂದಿಗೆ ಶೇ.0.41% ಇಳಿಕೆಯಾಗಿ 84,211.88 ಅಂಕಕ್ಕೆ ಸ್ಥಿರವಾಗಿದೆ. ನಿಫ್ಟಿ50 ಸೂಚ್ಯಂಕವು 96 ಪಾಯಿಂಟ್‌ಗಳ ಕುಸಿತದೊಂದಿಗೆ 25,795.15 ಅಂಕಕ್ಕೆ ಮುಕ್ತಾಯಗೊಂಡಿದೆ.ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು 0.25% ಮತ್ತು ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕ 0.19% ನಷ್ಟದಿಂದ ಮುಕ್ತಾಯಗೊಂಡಿದ್ದರಿಂದ ವಿಶಾಲ ಮಾರುಕಟ್ಟೆಗಳು ಕಳಪೆ ಪ್ರದರ್ಶನ ನೀಡಿವೆ. ಅಲ್ಲದೆ, ಕಳೆದ ಆರು ದಿನಗಳಿಂದ ನಿರಂತರ ಏರಿಕೆಯಲ್ಲಿದ್ದ ಷೇರುಪೇಟೆ ಇದೀಗ ವಾರಾಂತ್ಯದಲ್ಲಿ ಕುಸಿತಗೊಂಡಿದೆ.

ಇಂದಿನ ಗೇನರ್ಸ್ ಮತ್ತು ಲೂಸರ್ಸ್​

ಇಂದಿನ ವಹಿವಾಟಿನಲ್ಲಿ 8 ಷೇರುಗಳು ಶೇ.10 ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟು ಮುಗಿಸಿದವು. ಉತ್ಕರ್ಷ್ ಎಸ್‌ಎಫ್‌ಬಿ, ಎಪ್ಯಾಕ್ ಪ್ರಿಫ್ಯಾಬ್ ಟೆಕ್ನಾಲಜೀಸ್, ಅಡ್ವಾನ್ಸ್ ಅಗ್ರೋಲೈಫ್ ಮತ್ತು ಆರೋ ಗ್ರೀನ್‌ಟೆಕ್ ಅತಿ ಹೆಚ್ಚು ಲಾಭ ಗಳಿಸಿದವು. ಅರಿಹಂತ್ ಕ್ಯಾಪಿಟಲ್ ಮತ್ತು ಸಿಕ್ಕೋ ಇಂಡಸ್ಟ್ರೀಸ್ ಎಂಬ ಎರಡು ಷೇರುಗಳು ಮಾತ್ರ ಇಂದು ಶೇ. 10 ಕ್ಕಿಂತ ಹೆಚ್ಚಿನ ಕುಸಿತ ಕಂಡಿವೆ.(ಏಜೆನ್ಸೀಸ್)