ನ್ಯೂಸ್

ರಷ್ಯಾದೊಂದಿಗೆ ಮಾತುಕತೆಗೆ ಸಿದ್ಧವೆಂದ ಝೆಲೆನ್​ ಸ್ಕಿ

ಯೂಕ್ರೇನ್​: ರಷ್ಯಾದೊಂದಿಗೆ ಮಾತುಕತೆಗೆ ಸಿದ್ಧರಿದ್ದೇವೆ ಎಂದು ಯೂಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್​ ಸ್ಕಿ ಶನಿವಾರ ತಮ್ಮ ನಿರ್ಧಾರವನ್ನು ಘೋಷಿಸಿದ್ದಾರೆ.ಯುದ್ಧದ ಹೊರತಾಗಿಯೂ ನಾವು ಇತರೆ ಮಾರ್ಗದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಮೊದಲಿನಿಂದಲೂ ಪ್ರಯತ್ನಿಸಿದ್ದೇವೆ ಎಂದು ಬುಚ್​ಗೆ ಭೇಡಿ ನೀಡಿರುವ ಆಸ್ಟ್ರಿಯನ್​ ಚಾನ್ಸೆಲರ್​ ಕರ್ಲ್ ನೆಹಮ್ಮೆರ್​ ಅವರೊಂದಿಗೆ ಹೇಳಿಕೆ ನೀಡಿದ್ದಾರೆ.

ರಾಜತಾಂತ್ರಿಕ ಮಾತುಕತೆ ಮೂಲಕ ಯುದ್ಧವನ್ನು ಕೊನೆಗೊಳಿಸಲು ಯೂಕ್ರೇನ್​ ಸಿದ್ಧವಾಗಿದೆ.ಮಾರ್ಚ್ 29 ರಂದು ಉಭಯ ರಾಷ್ಟ್ರಗಳು ಮಾತುಕತೆ ನಡೆಸಿದ್ದವು ಎಂದಿದ್ದಾರೆ.ಇದೀಗ ಯೂಕ್ರೇನ್ ಮತ್ತೆ ಮಾತುಕತೆಗೆ ಆಹ್ವಾನಿಸಿದೆ.ನಾವು ಹೋರಾಡಲು ಸಿದ್ಧರಿದ್ದೇವೆ ಹಾಗೂ ರಾಜತಾಂತ್ರಿಕ ಮೂಲಕ ಯುದ್ಧವನ್ನು ಕೊನೆಗೊಳಿಸಲು ಸಜ್ಜಾಗಿದ್ದೇವೆ ಎಂದಿರುವ ಝೆಲೆನ್ಸ್​ಸ್ಕಿ ಪೂರ್ವ ಮತ್ತು ಪಶ್ಚಿಮದಲ್ಲಿನ ನಮ್ಮ ಪ್ರದೇಶಗಳ ಆಕ್ರಮಣಕ್ಕೆ ಸೈನಿಕರನ್ನು ಸಜ್ಜುಗೊಳಿಸಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.